ಬಹುಮಹಡಿ ಕಟ್ಟಡ ಧರೆಗುರುಳಿ ಧೂಳು ಎಬ್ಬಿಸಿದ ದೃಶ್ಯ
ಪಿಟಿಐ ಚಿತ್ರ
ಹಾವೇರಿ: ಬ್ಯಾಂಕಾಕ್‌ನಲ್ಲಿ ಭೂಕಂಪ ಸಂಭವಿಸಿದ್ದು, ಪ್ರವಾಸಕ್ಕೆ ತೆರಳಿದ್ದ ಹಾವೇರಿ ಜಿಲ್ಲೆಯ ಐವರು ಸುರಕ್ಷಿತವಾಗಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ.
ಹಾವೇರಿ ಜಿಲ್ಲೆಯ ಐವರು ಸ್ನೇಹಿತರು, ಬೆಂಗಳೂರಿನ ಮೂಲಕ ಮಾ. 23ರಂದು ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದಾರೆ. ಗುರುವಾರ ರಾತ್ರಿ ಅವರೆಲ್ಲರೂ ಬ್ಯಾಂಕಾಕ್‌ನಲ್ಲಿ ಉಳಿದುಕೊಂಡಿದ್ದರು. ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಫಾರಿ ವಾರ್ಡ್ ಪ್ರದೇಶಕ್ಕೆ ಹೊರಟಿದ್ದ ಸಂದರ್ಭದಲ್ಲಿ ಭೂಕಂಪನದ ಅನುಭವವಾಗಿರುವುದಾಗಿ ಗೊತ್ತಾಗಿದೆ.
ಬ್ಯಾಂಕಾಕ್ ಪ್ರವಾಸದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಹಾವೇರಿ ಯುವಕ, ‘ಬ್ಯಾಂಕಾಕ್ ಪ್ರವಾಸದಲ್ಲಿರುವ ನಾವು, ಸದ್ಯ ಸಫಾರಿ ವಾರ್ಡ್ ಬಳಿ ಇದ್ದೇವೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಅಲ್ಲಲ್ಲಿ ಭೂಕಂಪ ಆಗಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದಿದ್ದಾರೆ.
‘ಎಲ್ಲರೂ ಈಗ ಬೆಂಗಳೂರಿಗೆ ವಾಪಸು ಬರಲು ಪ್ರಯತ್ನಿಸುತ್ತಿದ್ದೇವೆ. ವಿಮಾನಗಳ ವೇಳಾಪಟ್ಟಿ ಬದಲಾಗಿದೆ. ತಡವಾಗಿ ವಿಮಾನ ಬರಲಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.