ಶಿಗ್ಗಾವಿ: ‘ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳು ಉದ್ಯೋಗದಿಂದ ವಂಚಿತರಾಬಾರದು ಎಂಬ ಉದ್ದೇಶದಿಂದ ವಿವಿಧ ಉದ್ಯೋಗ, ಬದುಕಿನ ನಿರ್ವಹಣೆ, ಉತ್ತಮ ಸಂಸ್ಕಾರಗಳ ಕುರಿತು ಸಮಾಜದ ವತಿಯಿಂದ ಉಚಿತ ಕೌಶಲ ಮತ್ತು ವ್ಯಕ್ತಿತ್ವ ವಿಕಾಸನ ತರಬೇತಿ ನೀಡಲಾಗುತ್ತಿದೆ. ಪ್ರಯೋಜನ ಪಡೆಯಲು ಸಮಾಜದ ವಿದ್ಯಾರ್ಥಿಗಳು ಮುಂದೆ ಬರಬೇಕು’ ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಸೋಮನಗೌಡ ಎಂ. ಪಾಟೀಲ ಹೇಳಿದರು.
ಪಟ್ಟಣದ ಪಂಚಮಸಾಲಿ ಸಮಾಜದ ಸಭಾಭವನದಲ್ಲಿ ಭಾನುವಾರ ನಡೆದ ತಾಲ್ಲೂಕು ಲಿಂಗಾಯತ ಪಂಚಮಸಾಲಿ ಸಮಾಜದಿಂದ ನಡೆಯಲಿರುವ ವ್ಯಕ್ತಿತ್ವ ವಿಕಾಸನ ಶಿಬಿರ, ಪಂಚಮಸಾಲಿ ಸಮಾಜದ ವಾರ್ಷಿಕ ಮಹಾಸಭೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆದಿದ್ದು, ಅದರಲ್ಲಿ ಧರ್ಮ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ನಮೂದಿಸಬೇಕು. ಅದರಿಂದ ಮುಂದೆ ಸಮಾಜದ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯವಾಗುತ್ತಿದೆ’ ಎಂದರು.
ಉಪನ್ಯಾಸಕ ಮಹೇಶ ದಾವಣಗೆರೆ ಮಾತನಾಡಿದರು. ಹಮೇಶ ಹಾವೇರಿ, ಸಮಾಜದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಅಗಡಿ, ತಾಲ್ಲೂಕು ಅಧ್ಯಕ್ಷ ವೀರೇಶ ಆಜೂರ, ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಸದಸ್ಯರಾದ ವಸಂತಾ ಬಾಗೂರ, ರಮೇಶ ವನಹಳ್ಳಿ, ಶ್ರೀಕಾಂತ ಪುಜಾರ, ಮಾಲತೇಶ ಯಲಿಗಾರ, ಅರುಣ ಹುಡೇದಗೌಡ್ರ, ಶಿವಾನಂದ ಮ್ಯಾಗೇರಿ, ವಿಶ್ವನಾಥ ಹರವಿ, ನಿರ್ಮಲಾ ಯಡೆಪ್ಪನವರ, ಅಕ್ಕಮ್ಮ ಜಕ್ಕನವರ, ಪ್ರೇಮಾ ಪಾಟೀಲ, ಮೇಘರಾಜ ಕೂಲಿ, ವೀರನಗೌಡ ಪಾಟೀಲ, ಭರಮಜ್ಜ ನವಲಗುಂದ, ಬಸನಗೌಡ ದುಂಡಿಗೌಡ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.