ಬ್ಯಾಡಗಿ ಮೆಣಸಿನಕಾಯಿ
ಬ್ಯಾಡಗಿ: ಇಲ್ಲಿಯ ಮಾರುಕಟ್ಟೆಗೆ ಸೋಮವಾರ 2,02,028 ಚೀಲ (50,507 ಕ್ವಿಂಟಲ್) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ದಿಢೀರ್ ಹೆಚ್ಷಳವಾಗಿದೆ. ಆದರೆ ಡಬ್ಬಿ ಮೆಣಸಿನಕಾಯಿ ಗರಿಷ್ಠ ಬೆಲೆಯಲ್ಲಿ ತುಸು ಇಳಿಕೆ ಕಂಡಿದೆ.
ಪ್ರಸಕ್ತ ಸಾಲಿನ ಹಂಗಾಮಿನಲ್ಲಿ ಮೊದಲ ಬಾರಿಗೆ 2 ಲಕ್ಷಕ್ಕೂ ಹೆಚ್ಚು ಚೀಲ ಮೆಣಸಿನಕಾಯಿ ಮಾರಾಟವಾಗಿವೆ. ಕಳೆದ ಗುರುವಾರ ಮಾರುಕಟ್ಟೆಗೆ 1,70,359 ಚೀಲ (42,589 ಕ್ವಿಂಟಲ್) ಮೆಣಸಿನಕಾಯಿ ಆವಕವಾಗಿತ್ತು. ಕಳೆದ ವಾರ ಒಟ್ಟಾರೆ 3,78,773 ಚೀಲ (94,693 ಕ್ವಿಂಟಲ್) ಮೆಣಸಿನಕಾಯಿ ಮಾರಾಟವಾಗಿರುವುದು ದಾಖಲಾಗಿದೆ.
ಸೋಮವಾರ ಮಾರುಕಟ್ಟೆಗೆ 17,154 ಲಾಟ್ ಮೆಣಸಿನಕಾಯಿ ಚೀಲಗಳನ್ನು ಟೆಂಡರ್‌ಗೆ ಇಡಲಾಗಿದ್ದು, ಈ ಪೈಕಿ ತೇವಾಂಶ ಹೆಚ್ಚಿರುವ ಹಾಗೂ ಗುಣಮಟ್ಟದ ಕೊರತೆ ಇರುವ 515 ಲಾಟ್‌ಗಳಿಗೆ ವರ್ತಕರು ಟೆಂಡರ್ ನಮೂದಿಸಿಲ್ಲ. 22 ಚೀಲ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹34,379ರಂತೆ, 20 ಚೀಲ ಕಡ್ಡಿ ಮೆಣಸಿನಕಾಯಿ ₹31,911ರಂತೆ ಹಾಗೂ ಗುಂಟೂರು ತಳಿ ಮೆಣಸಿನಕಾಯಿ ₹16,300ರಂತೆ ಗರಿಷ್ಟ ಬೆಲೆಯಲ್ಲಿ ಮಾರಾಟವಾಗಿವೆ.
ಕಳೆದ ಗುರುವಾರಕ್ಕಿಂತ ಡಬ್ಬಿ ಮೆಣಸಿನಕಾಯಿ ಗರಿಷ್ಠ ಬೆಲೆಯಲ್ಲಿ ₹3ಸಾವಿರ ಹಾಗೂ ಕಡ್ಡಿ ಮೆಣಸಿನಕಾಯಿ ₹2 ಸಾವಿರ ಇಳಿಕೆ ಕಂಡಿದೆ. ಸರಾಸರಿ ಬೆಲೆಯಲ್ಲಿಯೂ ತುಸು ಇಳಿಕೆಯಾಗಿದೆ. ಬ್ಯಾಡಗಿ ಡಬ್ಬಿ ₹29,359, ಬ್ಯಾಡಗಿ ಕಡ್ಡಿ ₹28,209 ಹಾಗೂ ಗುಂಟೂರ ತಳಿ ₹14,369ರಂತೆ ಮಾರಾಟವಾಗಿವೆ.
ಸೋಮವಾರದ ಮಾರುಕಟ್ಟೆ ದರ (ಪ್ರತಿ ಕ್ವಿಂಟಲ್‌ಗೆ)
ಕನಿಷ್ಠ;ಗರಿಷ್ಠ
ಬ್ಯಾಡಗಿ ಕಡ್ಡಿ;₹2,769-₹31,911
ಬ್ಯಾಡಗಿ ಡಬ್ಬಿ;₹3,209-₹34,379
ಗುಂಟೂರ ತಳಿ;₹1,009-₹16,300
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.