ಹಾವೇರಿ: ‘ರಾಜ್ಯದ ಕೆಲ ಕಾರ್ಖಾನೆಗಳಲ್ಲಿ ಕಬ್ಬು ಕಟಾವಿನ ವೇಸ್ಟೇಜ್ ಹೆಸರಿನಲ್ಲಿ ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ಅವರಿವರು ಹೇಳುತ್ತಿದ್ದಾರೆ. ಈ ಬಗ್ಗೆ ನಿಖರವಾಗಿ ದೂರು ನೀಡಿದರೆ, ಅಂಥವರಿಗೆ ₹ 5 ಲಕ್ಷ ಬಹುಮಾನ ನೀಡಲಾಗುವುದು’ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರೋಪದ ಬಗ್ಗೆ ಬಾಯಿ ಮಾತಿನಲ್ಲಿ ಹೇಳಿ ಸುಮ್ಮನಾಗಬಾರದು. ದೂರು ನೀಡಲು ರೈತರು ಮುಂದೆ ಬರಬೇಕು’ ಎಂದರು.
‘ದೇಶದಲ್ಲಿ ಕಬ್ಬು ಅರೆಯುವಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ. 81 ಸಕ್ಕರೆ ಕಾರ್ಖಾನೆಗಳಿವೆ. ಮೊದಲು ಆರು ತಿಂಗಳು ಕಾರ್ಖಾನೆಗಳು ಕಬ್ಬು ಅರೆಯುತ್ತಿದ್ದವು. ಈಗ ಮೂರು ತಿಂಗಳಲ್ಲಿ ಕಬ್ಬು ಖಾಲಿಯಾಗುತ್ತಿದೆ. ನಿಯಮಬಾಹಿರವಾಗಿ ವೇಸ್ಟೇಜ್ ಕಟಾವು ಮಾಡುತ್ತಿದ್ದರೆ, ರೈತರು ದೂರು ನೀಡಬೇಕು. ತನಿಖೆ ನಡೆಸಿ, ಕಾರ್ಖಾನೆಯ ಪರವಾನಗಿಯನ್ನು ರದ್ದು ಮಾಡಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.