
ತಡಸ: ಪ್ರತಿ ವರ್ಷದಂತೆ ಈ ವರ್ಷವೂ ಮಕರ ಸಂಕ್ರಾಂತಿ ಹಬ್ಬದ ದಿನದಂದು ಗಂಗೆಭಾವಿಯ ಜಾತ್ರಾ ಮಹೋತ್ಸವ ರಥೋತ್ಸವ ಸಾವಿರಾರು ಭಕ್ತರ ನಡುವೆ ಸಕಲ ವಾಧ್ಯ ಮೇಳದೊಂದಿಗೆ ಅದ್ದೂರಿಯಾಗಿ ಜರುಗಿತು.
ಗಂಗೇಭಾವಿಮಠದ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ರಥವನ್ನು ಎಳೆಯುವ ಮೂಲಕ ರಾಮಲಿಂಗೇಶ್ವರ ದೇವರಿಗೆ ಪಂಚಾಮೃತ ಅಭಿಷೇಕ ಹಾಗೂ ಮಹಾರುದ್ರಾಭಿಷೇಕ ಲಿಂಗೈಕ್ಯ ಶ್ರೀ ಯೋಗಿರಾಜೇಂದ್ರ ಮಹಾಸ್ವಾಮಿಗಳ ಗದ್ದುಗೆಗೆ ಮತ್ತು ಗವಿ ಶ್ರೀ ಗವಿಸಿದ್ದೇಶ್ವರ ಗದ್ದುಗೆಗೆ ಪೂಜಾ ಕೈಂಕರ್ಯ ಜರುಗಿದವು.
ಮಧ್ಯಾಹ್ನ 1ಗಂಟೆಗೆ ಸಕಲ ವಾದ್ಯ ವೈಭವಗಳೊಂದಿಗೆ ಶ್ರೀ ರಾಮಲಿಂಗೇಶ್ವರ ಉತ್ಸವ ಮೂರ್ತಿಯ ಮೆರವಣಿಗೆಯು ಹೊಸೂರ ಗ್ರಾಮದ ಶ್ರೀ ಬಸವಣ್ಣ ದೇವರ ಪಾದಗಟ್ಟಿಯಿಂದ ಗಂಗೇಭಾವಿಯ ತಲುಪಿತು
ಜಾತ್ರಾ ಮಹೋತ್ಸವ ಸುತ್ತ ಮುತ್ತಲಿನ ಗ್ರಾಮಗಳಾದ ಹೊಸೂರ, ಯತ್ತಿನಹಳ್ಳಿ, ಅ.ಮ.ಕೊಪ್ಪ, ಯತ್ತಿನಹಳ್ಳಿ ತಾಂಡಾ. ಕೆ.ಎಸ್.ಆರ್.ಪಿ. ೧೦ ನೇ ಪಡೆ ಗಂಗೇಭಾವಿ, ಅ.ಮ.ಹಿರೇಕೊಪ್ಪ, ಅರವಾಳ, ಧುಂಡಶಿ, ಶೀ ಸೋಮಾಪೂರ, ಮಾಕಾಪೂರ, ಮಡ್ಡಿ, ಬಸವನಕೊಪ್ಪ, ಬೆಂಡಲಗಟ್ಟಿ, ಕೋಣನಕೇರಿ, ಚಂದಾಪೂರ, ಕೆಂಗಾಪೂರ, ಕಬನೂರ, ಮುಗಳೀಕಟ್ಟಿ, ಕಲಕಟ್ಟಿ, ಶ್ಯಾಬಳ, ಅಂದಲಗಿ, ಮುಳಕೇರಿ, ಗೊಟಗೋಡಿ, ಕುನ್ನೂರ, ಶ್ಯಾಡಂಬಿ, ಕಡಹಳ್ಳಿ, ನೀರಲಗಿ, ತಡಸ, ಶಿಗ್ಗಾಂವಿ, ವನಹಳ್ಳಿ, ಬಿಶೆಟ್ಟಿಕೊಪ್ಪ, ಕಾಮನಹಳ್ಳಿ, ಹುಲಸೋಗಿ, ಗ್ರಾಮಗಳ ಸಕಲ ಸದ್ಭಕ್ತರು ಎತ್ತಿನ ಚಕ್ಕಡಿ, ಟ್ರಾಕ್ಟರ್ ಮೂಲಕ ಅಪಾರ ಸಂಖ್ಯೆಯ ಭಕ್ತರು ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.