
ಹಿರೇಕೆರೂರ: ‘ಶಿಕ್ಷಕ ವೃತ್ತಿ ಅಕ್ಷರ ಕಲಿಸುವ ಕೆಲಸ ಮಾತ್ರ ಆಗಿರದೇ ಸಮಾಜಕ್ಕೆ ಭವಿಷ್ಯದ ಪೀಳಿಗೆ ತಯಾರು ಮಾಡುವ ಆತ್ಮಸಂತೃಪ್ತಿಯ ಗುರುತರ ಜವಾಬ್ದಾರಿಯಾಗಿದೆ. ಅಮೂರ್ತವಾದ ಶಿಷ್ಯರ ಜೀವನವನ್ನು ತಿದ್ದಿ ಮೂರ್ತ ರೂಪಕ್ಕೆ ತಂದಾಗ, ಉತ್ತಮ ಜೀವನ ಮಾರ್ಗದಲ್ಲಿ ನಡೆಯುತ್ತಾರೆ’ ಎಂದು ಸಿಇಎಸ್ ಸಂಸ್ಥೆಯ ಕಾರ್ಯದರ್ಶಿ ಎಸ್.ಎಸ್. ಪಾಟೀಲ್ ಹೇಳಿದರು.
ಪಟ್ಟಣದ ಕೆ.ಎಚ್. ಪಾಟೀಲ್ ಪದವಿ ಪೂರ್ವ ಮಹಾವಿದ್ಯಾಲಯದ ಎಪಿಜೆ ಅಬ್ದುಲ್ ಕಲಾಂ ಸಭಾಭವನದಲ್ಲಿ ಭಾನುವಾರ 2009-2011ನೇ ಸಾಲಿನಲ್ಲಿ ಶಿಕ್ಷಣ ಪಡೆದ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಪನ್ಯಾಸಕ ನಾಗರಾಜ ನಿಂಗಪ್ಪನವರ ಮಾತನಾಡಿ, ‘ಗುರು-ಶಿಷ್ಯರ ಸಂಬಂಧ ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವಿನ ಪವಿತ್ರ ಬಂಧವಾಗಿದೆ. ಇದು ಜ್ಞಾನ, ಮಾರ್ಗದರ್ಶನ ಮತ್ತು ಅಧ್ಯಾತ್ಮಿಕ ಬೆಳವಣಿಗೆಗೆ ಪೂರಕ’ ಎಂದು ಹೇಳಿದರು.
ಪ್ರಾಚಾರ್ಯೆ ಕುಸುಮಾ ಮಾವಿನತೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಳೇ ವಿದ್ಯಾರ್ಥಿ ರವಿ ಶೇಷಗಿರಿ ಮಾತನಾಡಿ, ‘ನಮ್ಮ ಶಿಕ್ಷಕರು ಕೇವಲ ಪಠ್ಯ ಬೋಧಿಸಲಿಲ್ಲ. ಜೀವನದಲ್ಲಿ ಎದುರಾಗಬಹುದಾದ ಕಷ್ಟ ಹೇಗೆ ಎದುರಿಸಬೇಕು ಎಂಬುದನ್ನು ಕಲಿಸಿದರು. ಮಾದರಿಯಾಗಿ ನಮ್ಮ ಬದುಕು ರೂಪಿಸಿದರು’ ಎಂದು ಸ್ಮರಿಸಿದರು.
2011ರಲ್ಲಿ ಪಿಯು ಶಿಕ್ಷಣ ಪಡೆದ ಎಲ್ಲ ಹಳೆಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಯಲ್ಲಿ ಸೇರಿ, ಅಕ್ಷರ ಕಲಿಸಿದ ಶಿಕ್ಷಕರನ್ನು ಸನ್ಮಾನಿಸಿದರು.
ನಿವೃತ್ತ ಶಿಕ್ಷಕರಾದ ಜಿ.ವಿ. ಅಂಗಡಿ , ಎಂ.ಎಸ್. ರುದ್ರಗೌಡ , ಎನ್.ಎಂ. ಪುರದಾಳ, ಡಿ.ಬಿ. ಗಂಗೋಳ, ಎಚ್.ಎಸ್. ಹಲಗೇರಿ, ಕೆ.ಆರ್. ಲಮಾಣಿ, ಜೆ.ಪಿ. ನಟರಾಜ , ಎಸ್.ಎಸ್. ಚಿಂದಿ ಅವರನ್ನು ಸನ್ಮಾನಿಸಲಾಯಿತು. ಈಗಿನ ಶಿಕ್ಷಕರನ್ನೂ ಸನ್ಮಾನಿಸಲಾಯಿತು. ಅಗಲಿದ ಶಿಕ್ಷಕರಿಗೆ ಹಳೇ ವಿದ್ಯಾರ್ಥಿಗಳು ಶ್ರದ್ಧಾಂಜಲಿ ಸಲ್ಲಿಸಿದರು. ಹಳೆಯ ವಿದ್ಯಾರ್ಥಿಗಳು ಶಾಲೆಗೆ ನೆನಪಿನ ಕಾಣಿಕೆ ಅರ್ಪಿಸಿದರು.
ನಿರ್ಮಲಾ ಲಮಾಣಿ, ಸುನೀತಾ ರಟ್ಟಿಹಳ್ಳಿ, ಕವಿತಾ, ಬಸವರಾಜ ಬುರಡಿಕಟ್ಟಿ, ಸಿಇಎಸ್ ಸಂಸ್ಥೆಯ ಆಡಳಿತಾಧಿಕಾರಿ ಎಸ್. ವೀರಭದ್ರಯ್ಯ , ಪ್ರಕಾಶ ಉಪ್ಪಾರ, ವಿನಾಯಕ ಕರ್ನುಲ್, ಕವಿತಾ ಲಮಾಣಿ, ರಾಗು ಮರೀಗೌಡ್ರ, ಸುಮಾ ಅಣ್ಣಯ್ಯನವರ, ಪ್ರಭು ಸಂಗೂರ, ನವೀನ ಬಡಳ್ಳಿ, ಬುರಡಿಕಟ್ಟಿ ಬಸ್ಸ್ಯಾ, ಹನುಮಂತ ಮಲ್ಲಣ್ಣನವರ, ಮಂಜು ಶಿರಗಂಬಿ, ಮೇಘರಾಜ ಲಮಾಣಿ, ಚಂದ್ರು ಲಮಾಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.