ADVERTISEMENT

ಚುನಾವಣಾ ಕಣಕ್ಕೆ ಸಾಫ್ಟ್‌ವೇರ್ ಟೆಕಿ

ಹಿರೇಕೆರೂರಿನಲ್ಲಿ ಜೆಡಿಎಸ್‌ ಅಭ್ಯರ್ಥಿ ಉಜನೆಪ್ಪ ಜಟ್ಟೆಪ್ಪ ಕೋಡಿಹಳ್ಳಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:12 IST
Last Updated 1 ಡಿಸೆಂಬರ್ 2019, 13:12 IST
ಉಜನೆಪ್ಪ
ಉಜನೆಪ್ಪ   

ಬೆಂಗಳೂರು: ಹಾವೇರಿ ಜಿಲ್ಲೆಹಿರೇಕೆರೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಉಜನೆಪ್ಪ ಜಟ್ಟೆಪ್ಪ ಕೋಡಿಹಳ್ಳಿ (40) ಅವರು ಸಾಫ್ಟ್‌ವೇರ್‌ ಎಂಜಿನಿಯರ್‌. ಜನರಿಗೆ ಸೇವೆ ಸಲ್ಲಿಸುವ ಸಲುವಾಗಿಯೇ ಎರಡು ವರ್ಷಗಳ ಹಿಂದೆ ಕೆಲಸ ಬಿಟ್ಟು ಊರಿಗೆ ಬಂದಿದ್ದಾರೆ.

ಅನರ್ಹ ಶಾಸಕ ಬಿ.ಸಿ.ಪಾಟೀಲ್‌ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡುವ ಆಶಯದೊಂದಿಗೆ ಅವರು ಚುನಾವಣಾ ಕಣಕ್ಕೆ ಇಳಿದಿದ್ದು, ಗ್ರಾಮೀಣ ಜನರ ಬದುಕಿಗೆ ತಮ್ಮ ತಂತ್ರಜ್ಞಾನದ ಅನುಭವ ಮತ್ತು ಕಾರ್ಪೊರೇಟ್‌ ನಿರ್ವಹಣೆಯನ್ನು ಅಳವಡಿಸಿಕೊಳ್ಳುವ ಕನಸು ಕಂಡಿದ್ದಾರೆ.

ತೀರಾ ಬಡತನದಲ್ಲಿ ಬೆಳೆದ ಉಜನೆಪ್ಪ ಅವರು ಬಹುರಾಷ್ಟ್ರೀಯ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ ಆಗಿದ್ದವರು. ಹಲವು ದೇಶಗಳನ್ನು ಸುತ್ತಿ ಬಂದಿದ್ದಾರೆ. ಕುಡುಕ ತಂದೆಯಿಂದಾಗಿ ಮನೆ ಮಠ ಕಳೆದುಕೊಂಡರೂ ಸ್ನೇಹಿತರು, ಸಂಬಂಧಿಗಳ ಸಹಾಯದಿಂದ ಎಂಜಿನಿಯರಿಂಗ್‌ ಪದವಿ ಗಳಿಸಿದ್ದರು. ಆಯ್ಕೆಯಾದರೆ ಕ್ಷೇತ್ರದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವುದಕ್ಕೆ ಶ್ರಮಿಸುವ ವಾಗ್ದಾನ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.