
ತಿಳವಳ್ಳಿ: ಹೊಂಕಣ ಗ್ರಾಮದ ಹೊಳಿಲಿಂಗೇಶ್ವರ ಹಾಗೂ ಗುಬ್ಬಿ ನಂಜುಂಡೇಶ್ವರ ಸ್ವಾಮಿ ಮಹಾ ರಥೋತ್ಸವವು ಶುಕ್ರವಾರ ಜನಸಾಗರದ ಮಧ್ಯೆ ನಡೆಯಿತು.
ಹೊಳಿಲಿಂಗೇಶ್ವರ ಹಾಗೂ ಗುಬ್ಬಿ ಅಜ್ಜನ ಮಹಾ ರಥೋತ್ಸವದಲ್ಲಿ ಹೊಂಕಣ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಭಾಗವಹಿಸಿದ್ದು, ಈ ರಥೋತ್ಸವವು ಡೊಳ್ಳು, ಭಜನೆ, ವಾಧ್ಯ, ಸಮ್ಮಾಳ, ಗುಗ್ಗಳ, ವೀರಗಾಸೆ ತಂಡಗಳೊಂದಿಗೆ ಗ್ರಾಮದ ಹಳೆಯ ಮಠದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಹಾದು ಗುಬ್ಬಿ ಅಜ್ಜನ ಮಠಕ್ಕೆ ಬಂದು ಸಂಪನ್ನಗೊಂಡಿತು. ರಥಕ್ಕೆ ಜನರು ಬಾಳೆಹಣ್ಣು ಮತ್ತು ಉತತ್ತಿಯನ್ನು ಎಸೆದು ಭಕ್ತಿ ಭಾವ ಮೇರೆದರು. ಮಧ್ಯಾಹ್ನ 12 ಗಂಟೆಯಿಂದ ಮಠದ ಆವರಣದಲ್ಲಿ ಜಾತ್ರೆಗೆ ಬಂದ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಬೆಲೂರಿನ ಪುಷ್ಪಗಿರಿ ಸಂಸ್ಥಾನ ಮಠದ ಸೋಮಶೇಖರ ಸ್ವಾಮಿಜಿ, ಹೊತನಳ್ಳಿಯ ಸಿದ್ಧರೂಢ ಮಠದ ಶಂಕರಾನಂದ ಸ್ವಾಮಿಜಿ, ಸದ್ಗುರು ಯೋಗಾನಂದ ಮಹಾಸ್ವಾಮಿಗಳು ಸಿದ್ದಾಶ್ರಮ ಯಲವಟ್ಟಿ ಅವರ ದಿವ್ಯ ಸಾನಿಧ್ಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನೇರವೆರಿದವು.
ಹೊಂಕಣ ಗ್ರಾಮದ ಗುಬ್ಬಿ ನಂಜುಂಡೇಶ್ವರ ಸುಕ್ಷೇತ್ರದಲ್ಲಿ ಜ.17ರ ಶನಿವಾರ ಬೆಳಗ್ಗೆ 10 ರಿಂದ 4 ಗಂಟೆವರೆಗೆ ರಕ್ರದಾನ ಶಿಬಿರ ಹಾಗೂ ಜ.17 ರಿಂದ ಜ.19ರ ಸೋಮವಾರದವರೆಗೆ ಮೂರು ದಿನಗಳ ಬಾರಿ ಜಂಗೀ ಬಯಲು ಕುಸ್ತಿ ಪಂದ್ಯಗಳು ಜರುಗುವವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.