ADVERTISEMENT

ಹಿರೇಕೆರೂರು | ಹರಘರ್ ತಿರಂಗಾ ಅಭಿಯಾನ: ಬೈಕ್ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 16:07 IST
Last Updated 14 ಆಗಸ್ಟ್ 2024, 16:07 IST
ಹಿರೇಕೆರೂರು ಬಿಜೆಪಿ ಮಂಡಲದಿಂದ ಪಟ್ಟಣದಲ್ಲಿ ಹರ್‌ ಘರ್ ತಿರಂಗ ಅಭಿಯಾನದ ಅಂಗವಾಗಿ ತ್ರಿವರ್ಣ ಧ್ವಜದೊಂದಿಗೆ ಬೈಕ್ ರ‍್ಯಾಲಿ ನಡೆಸಲಾಯಿತು
ಹಿರೇಕೆರೂರು ಬಿಜೆಪಿ ಮಂಡಲದಿಂದ ಪಟ್ಟಣದಲ್ಲಿ ಹರ್‌ ಘರ್ ತಿರಂಗ ಅಭಿಯಾನದ ಅಂಗವಾಗಿ ತ್ರಿವರ್ಣ ಧ್ವಜದೊಂದಿಗೆ ಬೈಕ್ ರ‍್ಯಾಲಿ ನಡೆಸಲಾಯಿತು   

ಹಿರೇಕೆರೂರು: ಬಿಜೆಪಿ ಹಿರೇಕೆರೂರು ಮಂಡಲದಿಂದ ಪಟ್ಟಣದಲ್ಲಿ ಹರ್ ಘರ್ ತಿರಂಗ ಅಭಿಯಾನ ನಡೆಸಲಾಯಿತು.

ಪಟ್ಟಣದ ಮುಖ್ಯ ಸ್ಮಾರಕಗಳಾದ ವರಕವಿ ಸರ್ವಜ್ಞ, ವೀರಯೋಧ ಜಾವೀಧ ಖಾನ್ ಬಳಿಗಾರ ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಲಾಯಿತು. ನಂತರ ಪಟ್ಟಣದ ಸರ್ವಜ್ಞ ವೃತ್ತದಿಂದ ಜಿ.ಬಿ.
ಶಂಕರರಾವ್ ವೃತ್ತದ ವರೆಗೆ ತ್ರಿವರ್ಣ ಧ್ವಜದೊಂದಿಗೆ ಬೈಕ್ ರ‍್ಯಾಲಿ ಮೂಲಕ ಸ್ವಾತಂತ್ರ‍್ಯೋತ್ಸವದ ಜಾಗೃತಿ ಮೂಡಿಸಲಾಯಿತು.

ಬಿಜೆಪಿ ಮಂಡಲದ ಅಧ್ಯಕ್ಷ ಶಿವಕುಮಾರ್ ತಿಪ್ಪಶೆಟ್ಟಿ, ಜಿ.ಪಂ ಮಾಜಿ ಸದಸ್ಯ ಎನ್.ಎಂ. ಈಟೇರ್, ಮಂಡಲ ಪ್ರಧಾನ ಕಾರ್ಯದರ್ಶಿ ನಿಂಗಾಚಾರ ಮಾಯಾಚಾರ್, ಮಹೇಶ ಮುತ್ತಳ್ಳಿ, ಯುವ ಮೋರ್ಚಾ ಅಧ್ಯಕ್ಷ ಜಗದೀಶ್ ದೊಡ್ಡಗೌಡ್ರ, ಪ.ಪಂ ಸದಸ್ಯರಾದ ಗುರುಶಾಂತ್ ಎತ್ತಿನಹಳ್ಳಿ, ಹರೀಶ್ ಕಲಾಲ್, ಹನುಮಂತಪ್ಪ ಕುರುಬರ, ಮುಖಂಡ ಉಮೇಶ್ ಬಣಕಾರ್, ಮನೋಹರ್ ವಡ್ಡಿನಕಟ್ಟಿ, ವಿ.ಬಿ.ಚಿಟ್ಟೂರ್, ಎನ್.ಎಸ್. ಚಿಕ್ಕನರಗುಂದಮಠ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.