
ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ, ಮುನವಳ್ಳಿ ವ್ಯಾಪ್ತಿಯ ತೋಪಿನ ದುರ್ಗಾದೇವಿ ಜಾತ್ರಾ ಮಹೋತ್ಸವ ಹಾಗೂ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಡಿ.30 ರಿಂದ ಆರಂಭವಾಗಿದ್ದು, ಜ.5ರ ವರೆಗೆ ಜರುಗಲಿದೆ.
ಜ.1ರಂದು ಸಂಜೆ 4ಕ್ಕೆ ದುರ್ಗಾದೇವಿ ಮೂರ್ತಿ ಮೆರವಣಿಗೆ ನಡೆಯಲಿದೆ. ಜ.2ರಂದು ಹುಣ್ಣಿಮೆ ಕಾರ್ಯಕ್ರಮ ನಡೆಯಲಿದ್ದು, ಅರಳೆಲೆಮಠದ ರೇವಣಿಸಿದ್ದೇಶ್ವರ ಸ್ವಾಮೀಜಿ, ಕೆಂಡದ ಮಠದ ಸಿದ್ದಯ್ಯ ಮಹಾದೇವ ಸ್ವಾಮೀಜಿ, ಸದಾಶಿವಪೇಟೆ ಶರಣಬಸವೇಶ್ವರ ದಾಸೋಹ ಮಠದ ಶಿವದೇವ ಶರಣ ಸ್ವಾಮೀಜಿ ಸಾನ್ನಿಧ್ಯ
ವಹಿಸುವರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಯಾಸೀರ್ ಅಹ್ಮದ್‌ಖಾನ್ ಪಠಾಣ, ಹೆಸ್ಕಾಂ ನಿಗಮದ ಅಧ್ಯಕ್ಷ ಸೈಯದ್ ಅಜ್ಜಂಪೀರ್ ಖಾದ್ರಿ, ರಾಜ್ಯ ಗಡಿ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಸೇರಿದಂತೆ ಮುಂತಾದವರು ಆಗಮಿಸವರು.
ಜ.3ರಿಂದ ಜ.5ರ ವರೆಗೆ ಕುಸ್ತಿ ಪಂದ್ಯಾವಳಿ ಜರುಗಲಿದ್ದು, ವಿವಿಧ ರಾಜ್ಯ, ಜಿಲ್ಲೆಗಳಿಂದ ಕುಸ್ತಿ ಪಟುಗಳು ಆಗಮಿಸಲಿದ್ದಾರೆ. ಜ.3 ರಂದು ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು, ಜಾನಪದ ಕಲಾವಿದರಾದ ಬಸವರಾಜ ಗೊಬ್ಬಿ, ಜಗದೀಶ ಹುರಳಿ, ವಿದ್ಯಾಶ್ರೀ ಮಸನಬಿನಾಳ, ಗೌರಿ ಶಂಕರ ಕಲಾಮೇಳ, ಮುಕ್ತುಂಸಾಬ ಮಕಾನದಾರ ಆಗಮಿಸಿವರು. ಜ.4ರಂದು ಸವಾಲು ಭಜನಾ ಕಾರ್ಯಕ್ರಮ ಜರುಗಲಿದೆ. ಜ.6ರಂದು ಸಂತೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.