ADVERTISEMENT

ಉತ್ತಮ ಬದುಕಿಗೆ ವಚನಗಳು ಮಾರ್ಗದರ್ಶಿ

ಶರಣ ಸಾಹಿತ್ಯ ಸಮ್ಮೇಳನ ಸಮಾರೋಪ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 2:36 IST
Last Updated 23 ಡಿಸೆಂಬರ್ 2025, 2:36 IST
ಹಾನಗಲ್‌ನಲ್ಲಿ ಭಾನುವಾರ ನಡೆದ ಶರಣ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾಹಿತಿ ಪುಷ್ಪಾವತಿ ಶಲವಡಿಮಠ ಮಾತನಾಡಿದರು
ಹಾನಗಲ್‌ನಲ್ಲಿ ಭಾನುವಾರ ನಡೆದ ಶರಣ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾಹಿತಿ ಪುಷ್ಪಾವತಿ ಶಲವಡಿಮಠ ಮಾತನಾಡಿದರು   

ಹಾನಗಲ್: ‘ವಚನಗಳು ಉತ್ತಮ ಬದುಕಿನ ಅನುಸರಣೆಯ ಮಾರ್ಗದರ್ಶಿ ಸಂದೇಶಗಳಾಗಿವೆ. ಸಾವಿಲ್ಲದ ಸತ್ಯವನ್ನೊಳಗೊಂಡು ಬತ್ತದ ಗಂಗೆಯಂತೆ ವಚನಗಳು ಸದಾ ಪವಿತ್ರವಾಗಿ ಎಲ್ಲ ಜೀವಿಯ ಹಿತಕ್ಕೆ ಮಾರ್ಗದರ್ಶಕವಾಗಿವೆ’ ಎಂದು ಹಾವೇರಿಯ ಸಾಹಿತಿ ಪುಷ್ಪಾವತಿ ಶಲವಡಿಮಠ ನುಡಿದರು.

ಇಲ್ಲಿನ ಶಂಕರ ಮಂಗಲ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ ಹಾಗೂ ಕದಳಿ ಮಹಿಳಾ ವೇದಿಕೆ ಭಾನುವಾರ ಆಯೋಜಿಸಿದ್ದ ಶರಣ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಜಾಗತಿಕ ಅಶಾಂತಿ ಮುಗಿಲು ಮುಟ್ಟಿದ ಈ ಸಂದರ್ಭದಲ್ಲಿ ವಚನಗಳು ಜಾಗತಿಕ ಶಾಂತಿಗೆ ಅತ್ಯುತ್ತಮ ಶಕ್ತಿ ಸಂದೇಶಗಳು’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಥಳೀಯ ವೈದ್ಯ ವಿಶ್ವಾರಾಧ್ಯ ಪುರಾಣಿಕಮಠ, ‘ಶರಣರ ನಡೆ, ನುಡಿಗಳು ಬದುಕಿನ ಆಚರಣೆಗೆ ಕಾಯಕಲ್ಪವಿದ್ದಂತೆ. ಎಲ್ಲ ಕಾಲಕ್ಕೂ ಸಲ್ಲುವ ವಚನಗಳು ನಮ್ಮ ಮನೆ ಮನಸ್ಸಿನಲ್ಲಿ ನಿರಂತರ ಕೆಲಸ ಮಾಡುವಂತಾಗಬೇಕು’ ಎಂದರು.

ಸಮ್ಮೇಳನದ ಅಧ್ಯಕ್ಷೆ ನೀಲಮ್ಮ ಉದಾಸಿ, ಸ್ವಾಗತ ಸಮಿತಿ ಅಧ್ಯಕ್ಷ ನಾಗಪ್ಪ ಸವದತ್ತಿ, ಗೌರವಾಧ್ಯಕ್ಷ ಎಚ್.ಎಚ್.ರವಿಕುಮಾರ, ಉಪಾಧ್ಯಕ್ಷ ರವಿಬಾಬು ಪೂಜಾರ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ಶಿಡ್ಲಾಪುರ, ಕಲ್ಯಾಣಕುಮಾರ ಶೆಟ್ಟರ, ಕುಮಾರ ಹತ್ತಿಕಾಳ, ಬಿ.ಆರ್.ಶೆಟ್ಟರ, ವಸಂತ ಚಿಕ್ಕಣ್ಣನವರ, ಜಿ.ಎಸ್.ಮುಚ್ಚಂಡಿ, ಪಿ.ಎಂ.ಪಾಟೀಲ, ಅನಿತಾ ಕಿತ್ತೂರ, ಶ್ರೀಮತಿ ಓಂಕಾರಿ, ಮಹದೇವ ಕರಿಯಣ್ಣನವರ, ಬಿ.ಎಸ್.ಚಲ್ಲಾಳ, ರಾಜೇಶ್ವರಿ ಪಾಟೀಲ, ಜಿ.ಎಂ.ಓಂಕಾರಣ್ಣನವರ, ವಿದ್ಯಾಧರ ಕುತನಿ, ಗೀತಕ್ಕ ಕಬ್ಬೂರ, ಗಾಯತ್ರಮ್ಮ ಕುರುವತ್ತಿ ಇದ್ದರು.

ಶೋಭಾ ಪಾಟೀಲ ಸ್ವಾಗತಿಸಿದರು. ಪ್ರವೀಣ ಬ್ಯಾತನಾಳ ಕಾರ್ಯಕ್ರಮ ನಿರೂಪಿಸಿದರು. ವಿಜಯಲಕ್ಷ್ಮೀ ಹಳ್ಳೀಕೆರಿ ವಂದಿಸಿದರು.

ಸಮ್ಮೇಳನದ ಮೊದಲ ಶರಣ ಗೋಷ್ಠಿಯನ್ನು ಕುಮಾರೇಶ್ವರ ಕಾಲೇಜು ಉಪನ್ಯಾಸಕ ವಿಶ್ವನಾಥ ಬೋಂದಾಡೆ ಉದ್ಘಾಟಿಸಿದರು. ಎಸ್.ಸಿ.ಕಲ್ಲನಗೌಡರ ಅಧ್ಯಕ್ಷತೆ ವಹಿಸಿದ್ದರು. ಅಶೋಕ ದಾಸರ ಆಶಯ ನುಡಿ ನುಡಿದರು. ಶಿರಶಿಯ ಸಿದ್ದಲಿಂಗ ನಾಸಿ ಉಪನ್ಯಾಸ ನೀಡಿದರು.

ಎರಡನೇ ಗೋಷ್ಠಿಯನ್ನು ಸಾಗರದ ಸಾಹಿತಿ ವೈ.ಎಂ.ಶೀವಲೀಲಾ ಉದ್ಘಾಟಿಸಿದರು. ಶಿವಗಂಗಕ್ಕ ಪಟ್ಟಣದ ಅಧ್ಯಕ್ಷತೆ ವಹಿಸಿದ್ದರು. ರೇಖಾ ಶೆಟ್ಟರ ಆಶಯ ನುಡಿ ನುಡಿದರು. ಜಗದೀಶ ಹತ್ತೀಕೋಟಿ ಉಪನ್ಯಾಸ ನೀಡಿದರು.

ಸಿ.ಮಂಜುನಾಥ, ಎಂ.ಪ್ರಸನ್ನಕುಮಾರ, ಸಂತೋಷ ದೊಡ್ಡಮನಿ, ರೂಪಾ ಗೌಳಿ, ಸುನಿತ ಉಪ್ಪಿನ, ಸುಜಾತಾ ನಂದೀಶೆಟ್ಟರ, ವೀಣಾ ಗುಡಿ, ಶಿವಾನಂದ ಕ್ಯಾಲಕೊಂಡ, ಸುರೇಶ ಹೀರೂರ, ಶಶಿಕಾಂತ ರಾಠೋಡ, ಸಿ.ಎನ್.ಲಕ್ಕನಗೌಡರ, ವಿ.ಜಿ.ಯಳಗೇರಿ, ಬಿ.ಎಸ್.ಕರಿಯಣ್ಣನವರ, ವೀಣಾ ಬ್ಯಾತನಾಳ, ವಿಜಯಕ್ಕ ಗುಡಗುಡಿ, ಅಕ್ಕಮ್ಮ ಕುಂಬಾರಿ, ಸೌಭಾಗ್ಯ ಉದಾಸಿ, ಶಾಂತಕ್ಕ ಹೊಳಲದ, ವಿಜಯಕ್ಕ ಕಬ್ಬೂರ, ಪಾರ್ವತಿಬಾಯಿ ಕಾಶೀಕರ, ದೀಪಾ ವಿರುಪಣ್ಣನವರ, ಶಾರದಾ ಉದಾಸಿ, ರಾಜೇಶ್ವರಿ ತಿರುಮಲೆ, ಮಧುಮತಿ ಪೂಜಾರ, ಅಕ್ಕಮ್ಮ ಸುಗಾವಿ ಪಾಲ್ಗೊಂಡಿದ್ದರು.

ವಚನ ಸಂಗೀತ ಮತ್ತು ವಚನಾಧಾರಿತ ಭರತ ನಾಟ್ಯ, ವಚನ ನೃತ್ಯ ನೆರೆದವರ ಮೆಚ್ಚುಗೆ ಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.