ADVERTISEMENT

ಹಾವೇರಿ: ಸಾವಿರಕ್ಕೂ ಹೆಚ್ಚು ಉರಗ ರಕ್ಷಿಸಿದ ವಿಶ್ವನಾಥ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 7:20 IST
Last Updated 19 ಅಕ್ಟೋಬರ್ 2025, 7:20 IST
ವಿಶ್ವನಾಥ ಅಧ್ಯಾಪಕ
ವಿಶ್ವನಾಥ ಅಧ್ಯಾಪಕ   

ರಟ್ಟೀಹಳ‍್ಳಿ: ಹಾವು ಎಂದು ಹೆಸರು ಕೇಳಿದರೆ ನೂರು ಮಾರು ಹಾರುವ ಜನ ಬಹಳ, ಆದರೆ ಕೋಟೆಯ ಬ್ರಾಹ್ಮಣ ಪುರೋಹಿತ ವಿಶ್ವನಾಥ ಅಧ್ಯಾಪಕ ಹಾವು ಹಿಡಿಯುವ ಕಾಯಕದಲ್ಲಿ ಪರಿಣಿತ. ಕಳೆದ ಎರಡು ವರ್ಷದ ಅವಧಿಯಲ್ಲಿ ಸರಿಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿವಿಧ ಜಾತಿಯ ವಿಷದ ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಟ್ಟು ಬಂದಿರುವುದು ಇವರ ಸಾಹಸ.

ಇಲ್ಲಿಯವರೆಗೆ ಒಂದೇ ಒಂದು ಹಾವನ್ನು ಕೂಡ ಇವರು ಹೊಡೆದು ಸಾಯಿಸದಿರುವುದು ಅವರ ಇನ್ನೊಂದು ಹೆಮ್ಮೆಯ ಸಂಗತಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹ‍ಳ‍್ಳಿಗಳಿಗೆ ಹೋಗಿ ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಹಾವು ಇರುವ ಬಗ್ಗೆ ವಿಷಯ ತಿಳಿಸುತ್ತಲೇ ವಿಶ‍್ವನಾಥ ಅಲ್ಲಿಗೆ ಹಾಜರಾಗಿ ಯಾವುದೇ ಭಯಭೀತಿ ಇಲ್ಲದೆ ಸುರಕ್ಷಿತವಾಗಿ ಹಾವು ಸೆರೆಹಿಡಿಯುತ್ತಾರೆ.

ನಾನು ಪ್ರಾಣಿಪ್ರಿಯ ಮನೆಯಲ್ಲಿ ಸಾಕು ನಾಯಿ, ಬೆಕ್ಕುಗಳಿವೆ. ಜೊತೆಗೆ ಉರಗ ಸಂತತಿ ರಕ್ಷಣೆ ಮಾಡುವ ಉದ್ದೇಶದಿಂದ ಅವುಗಳನ್ನು ಹಿಡಿದು ಅರಣ್ಯಕ್ಕೆ ಕಳಿಸುವ ಕೆಲಸ ಮಾಡುತ್ತಿದ್ದೇನೆ. ಇದಕ್ಕೆ ನನ್ನ ಮನೆಯವರ ಪ್ರೋತ್ಸಾಹ ಕೂಡ ಇದೆ. ಹಾವು ಹಿಡಿಯುವ ಕಾಯಕಕ್ಕೆ ನಾನು ಯಾವುದೇ ಸಂಭಾವನೆ ಪಡೆಯುವುದಿಲ್ಲ. ನನ್ನ ಮುಖ್ಯ ಉದ್ದೇಶ ಉರಗ ಸಂರಕ್ಷಣೆಯಾಗಿದೆ ಎನ್ನುತ್ತಾರೆ ವಿಶ‍್ವನಾಥ ಅಧ್ಯಾಪಕ.

ADVERTISEMENT

ವೃತ್ತಿಯಿಂದ ನಾನು ಪುರೋಹಿತನಾಗಿದ್ದು, ಕೋಟೆಯ ನರಸಿಂಹದೇವರ ದೇವಸ್ಥಾನ ಅರ್ಚಕ. ಜೊತೆಗೆ ವೇದ ಅಧ್ಯಯನ ಮಾಡಿದ್ದು, ಮನೆಗೆ ಬರುವ ಭಕ್ತರಿಗೆ ಭವಿಷ್ಯ ಹೇಳುತ್ತೇನೆ. ಯಾರಿಗೂ ನಾನು ಹಣಕ್ಕೆ ಒತ್ತಾಯಿಸುವುದಿಲ್ಲ. ಕಷ್ಟ ಎಂದು ಬರುವ ಜನರಿಗೆ ಸೂಕ್ತ ಪೂಜೆ ಮೂಲಕ ಸಂಕಷ್ಟ ಪರಿಹರಿಸುವ ಕುರಿತು ಮಾರ್ಗದರ್ಶನ ನೀಡುತ್ತಾ ಭಗವಂತನ ಸೇವೆಗೈಯುತ್ತಿದ್ದಾನೆ. ರೈತ ಸಮುದಾಯಕ್ಕೆ ಅನುಕೂಲ ಕಲ್ಪಿಸಲು ಬೋರ ಪಾಯಿಂಟ್ ಗುರುತಿಸುವ ಕಾರ್ಯಮಾಡುತ್ತೇನೆ. ದೂರದಸ್ಥಳಗಳಿಗೆ ದೂರವಾಣಿ ಮೂಲಕ ಬೋರ್ ಪಾಯಿಂಟ್ ಹೇಳುತ್ತಾನೆ. ಸಹಾಯಕ್ಕಾಗಿ ಸಾರ್ವಜನಿಕರು ಈ ಮೊಬೈಲ್ ನಂಬರ. ಗೆ ಸಂಪರ್ಕಿಸಬಹುದಾಗಿದೆ. ಮೊ–98844851799

ರಟ್ಟೀಹಳ‍್ಳಿ ಪಟ್ಟಣದಲ್ಲಿ ಇತ್ತೀಚಿಗೆ ಮನೆಯೊಂದರ ಹಿತ್ತಲಿನಲ್ಲಿ ಬಂದ ನಾಗರಹಾವು ಸೆರೆಹಿಡಿಯುವ ಕೆಲಸದಲ್ಲಿ ವಿಶ‍್ವನಾಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.