
ಶಿಗ್ಗಾವಿ: ನಮ್ಮ ನಾಡು, ನಮ್ಮ ಜನ ಎಂಬ ಮನೋಭಾವ ಪ್ರತಿಯೊಬ್ಬರಲ್ಲಿ ಬೆಳೆಯಬೇಕು. ರಾಷ್ಟ್ರೀಯ ಕುರಿತು ಆಸಕ್ತಿ ಅಭಿರುಚಿ ಮೂಡಿಸಿಕೊಳ್ಳಬೇಕು. ಅಲ್ಲದೆ ನಾಡಿನ ಶ್ರೇಯೋಭಿವೃದ್ಧಿಯಲ್ಲಿ ಯುವಶಕ್ತಿ ಪಾತ್ರ ಮುಖ್ಯವಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯ ರಮೇಶ ಎನ್.ತೆವರಿ ಹೇಳಿದರು.
ತಾಲ್ಲೂಕಿನ ಬಂಕಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಕಾಲೇಜಿನ ವಿವಿಧ ಘಟಕಗಳ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ನಡೆದ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ರಾಮಕೃಷ್ಣ ಪರಮಹಂಸರ ಆಪ್ತ ಶಿಷ್ಯರಾಗಿ ಅಧ್ಯಾತ್ಮಿಕ ಜ್ಞಾನ ಪಡೆದು ಇಡೀ ಜಗತ್ತಿಗೆ ಗುರುಶಿಷ್ಯ ಪರಂಪರೆ ಮಹತ್ವ ತೋರಿಸಿದ್ದಾರೆ. ರಾಮಕೃಷ್ಣಮಠ ಮತ್ತು ಕಾಮಕೃಷ್ಣ ಮಿಷನ್ ಸ್ಥಾಪಿಸುವ ಜತೆಗೆ ಇಡೀ ವಿಶ್ವಕ್ಕೆ ಭಾರತೀಯ ವೇದಾಂತ ತತ್ವಗಳನ್ನು ಪರಿಚರಿಸಿದರು. ಅಮೆರಿಕದ ಚಿಕಾಗೋದಲ್ಲಿ ನಡೆದ ವಿಶ್ವಧರ್ಮಗಳ ಸಂಸತ್ತಿನಲ್ಲಿ ವಿಶ್ವ ಸಹೋದರತ್ವ ಸಂದೇಶ ಸಾರಿದ್ದಾರೆ. ಅದರಿಂದ ದೇಶದ ಯುವ ಜನತೆಗೆ ಸ್ಪತರ್ಿ ನೀಡಿದ್ದಾರೆ. ಅಂತಹ ಮಹಾತ್ಮರ ಸ್ಮರಣೆ ಅರ್ಥರ್ಣವಾಗಿದೆ ಎಂದರು.
ಪ್ರಾಧ್ಯಾಪಕರಾದ ಮಂದಾಕಿನಿ ಪಾಟೀಲ, ನಿಂಗಪ್ಪ ಕಲಕೋಟಿ, ನಾಜನಿಸ್ ಹಿರೆಕುಂಬಿ, ವಿಜಕುಮಾರ ಗುಡಿಗೇರಿ, ಮಹೇಶ ಡುಮನಾಳ, ಬಲರಾಮಗೌಡ, ಮಹದೇವಪ್ಪ ಸಣ್ಣಬಸಪ್ಪನವರ, ಹನುಮಂತಪ್ಪ ದುಳ್ಳಮ್ಮನವರ, ಅಂಜಲಿ, ಡಿಸೋಜಾ, ಸವಿತಾ ಮಾಲಗಾವಿ, ವಿಜಯಲಕ್ಷ್ಮಿ ವಡಗಾವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.