ADVERTISEMENT

ಹಾವೇರಿ: ‘ವಿ.ಕೃ.ಗೋಕಾಕರ ಪರಿಚಯ ತಿಳಿಸುವ ಕೆಲಸವಾಗಲಿ’

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 4:52 IST
Last Updated 10 ಆಗಸ್ಟ್ 2025, 4:52 IST
ಸವಣೂರು ಪಟ್ಟಣದ ಡಾ.ವಿ.ಕೃಗೋಕಾಕ ಸಾಂಸ್ಕೃತಿಕ ಭವನದಲ್ಲಿ ಡಾ. ವಿ.ಕೃ.ಗೋಕಾಕ ಸ್ಮಾರಕ ಟ್ರಸ್ಟ್ ಹಾವೇರಿ, ತಾಲ್ಲೂಕು ಆಡಳಿತ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಸಹಯೋಗದಲ್ಲಿ ಶನಿವಾರ ಜರುಗಿದ ಡಾ. ವಿ.ಕೃ.ಗೋಕಾಕರ 116ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಯಾಸೀರಅಹಮ್ಮದ ಖಾನ ಪಠಾಣ ಉದ್ಘಾಟಿಸಿದರು
ಸವಣೂರು ಪಟ್ಟಣದ ಡಾ.ವಿ.ಕೃಗೋಕಾಕ ಸಾಂಸ್ಕೃತಿಕ ಭವನದಲ್ಲಿ ಡಾ. ವಿ.ಕೃ.ಗೋಕಾಕ ಸ್ಮಾರಕ ಟ್ರಸ್ಟ್ ಹಾವೇರಿ, ತಾಲ್ಲೂಕು ಆಡಳಿತ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಸಹಯೋಗದಲ್ಲಿ ಶನಿವಾರ ಜರುಗಿದ ಡಾ. ವಿ.ಕೃ.ಗೋಕಾಕರ 116ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಯಾಸೀರಅಹಮ್ಮದ ಖಾನ ಪಠಾಣ ಉದ್ಘಾಟಿಸಿದರು   

ಸವಣೂರು: ಜ್ಞಾನಪೀಠ ಪುರಸ್ಕೃತ ವಿ.ಕೃ.ಗೋಕಾಕರ ಇತಿಹಾಸ ಇಂದಿನ ವಿದ್ಯಾರ್ಥಿಗಳಿಗೆ ಪರಿಚಯ ಇಲ್ಲದೆ ಇರುವುದು ವಿಷಾದನೀಯ ಸಂಗತಿ. ಅವರ ಬಗ್ಗೆ ಪ್ರಚಾರ ಮಾಡುವ ಕೆಲಸವನ್ನು ಶಿಕ್ಷಣ ಇಲಾಖೆ ಸೇರಿದಂತೆ ಸಂಘ–ಸಂಸ್ಥೆಗಳು ಮಾಡಬೇಕಾಗಿದೆ ಎಂದು ಶಾಸಕ ಯಾಸೀರಹಮ್ಮದಖಾನ ಪಠಾಣ ಹೇಳಿದರು.

ಪಟ್ಟಣದ  ಡಾ.ವಿ.ಕೃ. ಗೋಕಾಕ ಸಾಂಸ್ಕೃತಿಕ  ಭವನದಲ್ಲಿ ಡಾ.ವಿ.ಕೃ.ಗೋಕಾಕ ಸ್ಮಾರಕ ಟ್ರಸ್ಟ್ ಹಾವೇರಿ, ತಾಲ್ಲೂಕು ಆಡಳಿತ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಸಹಯೋಗದಲ್ಲಿ ಶನಿವಾರ ಜರುಗಿದ ಡಾ.ವಿ.ಕೃ.ಗೋಕಾಕರ 116ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸವಣೂರಿನ ಕೀರ್ತಿ ಪತಾಕಿಯನ್ನು ವಿ.ಕೃ.ಗೋಕಾಕರು ದೇಶದಾದ್ಯಂತ ಹರಡಿರುವುದು ಹೆಮ್ಮೆಯ ವಿಷಯವಾಗಿದೆ. ಅವರ ಪರಿಚಯದ ಪುಸ್ತಕಗಳನ್ನು ನೀಡುವಂತ ಕೆಲಸ ಕೈಗೊಳ್ಳಬೇಕಾಗಿದೆ. ಅವರ ಪರಿಚಯದ ಪುಸ್ತಕಗಳನ್ನು ಸ್ವಂತ ಖರ್ಚಿನಲ್ಲಿ ನೀಡುವ ಕೆಲಸಕ್ಕೆ ಸದ್ಯದಲ್ಲಿಯೇ ಚಾಲನೆ ನೀಡಲಾಗುವುದು ಎಂದರು.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪವಿಭಾಗಾಧಿಕಾರಿ ಶುಭಂ ಶುಕ್ಲಾ ವಹಿಸಿದ್ದರು. ಗೋಕಾಕರ ಜನ್ಮ ದಿನಾಚರಣೆ ಅಂಗವಾಗಿ ಜರುಗಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 15 ಜನ ರಕ್ತ ದಾನ ಮಾಡಿದರು. ಸೃಜನಿ ನಾಟ್ಯ ಶಾಲೆಯ ವಿದ್ಯಾರ್ಥಿಗಳು ಭರತ ನಾಟ್ಯ ಪ್ರದರ್ಶನ ನೀಡಿದರು.

ನಿವೃತ್ತ ಉಪನ್ಯಾಸಕ ಎಂ.ಆರ್.ಚೂರಿ ವಿ.ಕೃ.ಗೋಕಾಕರ ಕುರಿತು ಉಪನ್ಯಾಸವನ್ನು ನೀಡಿದರು.
ತಹಶೀಲ್ದಾರ್‌ ರವಿಕುಮಾರ ಕೊರವರ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮೀತಿ ಅಧ್ಯಕ್ಷ ಸುಭಾಸ ಮಜ್ಜಗಿ, ಬ್ಲಾಕ್ ಕಾಂಗ್ರೆಸ್‌ ತಾಲ್ಲೂಕು ಅಧ್ಯಕ್ಷ ಎಂ.ಜೆ.ಮುಲ್ಲಾ, ಕೆಡಿಪಿ ಸದಸ್ಯ ರವಿ ಕರಿಗಾರ, ಪುರಸಭೆ ಉಪಾದ್ಯಕ್ಷ ಖಮರುನ್ನಿಶಾ ಪಟೇಲ್, ವಿ.ಕೃ.ಗೋಕಾಕರ ಟ್ರಸ್ಟ್‌ ಸದಸ್ಯರಾದ ಸತೀಶ ಕುಲಕರ್ಣಿ, ಪರಶುರಾಮ ಇಳಗೇರ, ಕಸಾಪ ಅಧ್ಯಕ್ಷ ಚಂದ್ರಗೌಡ ಪಾಟೀಲ, ಲಕ್ಷ್ಮಣ ಕನವಳ್ಳಿ, ನಾಗಪ್ಪ ತಿಪ್ಪಕ್ಕನವರ, ಪಾಡಂಪ್ಪ ತಿಪ್ಪಕ್ಕನವರ, ಜೀಶಾನ ಪಠಾಣ, ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ, ಗುಡ್ಡಪ್ಪ ಜಲದಿ, ಎಸ್.ಎಂ.ಮಣಕಟ್ಟಿ ಹಾಗೂ ವಿ,ಕೃ.ಗೋಕಾಕರ ಅಭಿಮಾನಿಗಳು, ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

ಕಾರ್ಯಕ್ರಮವನ್ನು ಸಿ.ವಿ.ಗುತ್ತಲ ಹಾಗೂ ನಿವೃತ ಶಿಕ್ಷಕ ಕೋಳಿವಾಡ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.