ADVERTISEMENT

ಹಾನಗಲ್ | ಮತಕಳ್ಳತನ: ಸಹಿ ಸಂಗ್ರಹಣೆ ಅಭಿಯಾನ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 5:08 IST
Last Updated 29 ಸೆಪ್ಟೆಂಬರ್ 2025, 5:08 IST
ಹಾನಗಲ್‌ನಲ್ಲಿ ಆಯೋಜಿಸಿದ ಸಹಿ ಸಂಗ್ರಹ ಅಭಿಯಾನಕ್ಕೆ ಶಾಸಕ ಶ್ರೀನಿವಾಸ ಮಾನೆ ಚಾಲನೆ ನೀಡಿದರು 
ಹಾನಗಲ್‌ನಲ್ಲಿ ಆಯೋಜಿಸಿದ ಸಹಿ ಸಂಗ್ರಹ ಅಭಿಯಾನಕ್ಕೆ ಶಾಸಕ ಶ್ರೀನಿವಾಸ ಮಾನೆ ಚಾಲನೆ ನೀಡಿದರು    

ಹಾನಗಲ್: ‘ಮತಕಳ್ಳತನದ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯವ್ಯಾಪಿ ಸಹಿ ಸಂಗ್ರಹ ಅಭಿಯಾನಕ್ಕೆ ಕರೆ ನೀಡಿದೆ’ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ‘ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಾರಂಭಿಸಿದ ಅಭಿಯಾನಕ್ಕೆ ಮನ್ನಣೆ ದೊರಕಿದೆ’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ, ಮಂಜು ಗೊರಣ್ಣನವರ ಮಾತನಾಡಿದರು. ಮುಖಂಡರಾದ ಟಾಕನಗೌಡ ಪಾಟೀಲ, ಮತೀನ್ ಶಿರಬಡಗಿ, ವಿಜಯಕುಮಾರ ದೊಡ್ಡಮನಿ, ಮಾರ್ಕಾಂಡೆಪ್ಪ ಮಣ್ಣಮ್ಮನವರ, ರವೀಂದ್ರ ದೇಶಪಾಂಡೆ, ಗನಿ ಪಟೇಲ್, ಆದರ್ಶ ಶೆಟ್ಟಿ, ಖ್ವಾಜಾಮೊಹಿದ್ದೀನ್ ಅಣ್ಣಿಗೇರಿ, ಜಗದೀಶ ಹೊಸಮನಿ, ರಾಜಕುಮಾರ ಶಿರಪಂತಿ, ಸಂದೀಪ ಪಾಟೀಲ, ಲೀಲಾವತಿ ದೊಡ್ಡಮನಿ, ಬಸನಗೌಡ ಪಾಟೀಲ, ರಾಮಚಂದ್ರ ಕಲ್ಲೇರ, ಲಿಂಗರಾಜ ಮಡಿವಾಳರ, ರಫೀಕ್ ಉಪ್ಪುಣಸಿ, ರಾಜೂ ಗಾಡಿಗೇರ, ಪ್ರವೀಣ ಹಿರೇಮಠ, ಸುನೀಲ್ ಮುದುಕಣ್ಣನವರ, ಬಸವಂತ ವಾಲಿಕಾರ, ಮಹಬಳೇಶ್ವರ ಚಿಕ್ಕಮಠ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.