ADVERTISEMENT

ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ: ಮತ ಎಣಿಕೆ ಕೇಂದ್ರ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 13:38 IST
Last Updated 13 ಅಕ್ಟೋಬರ್ 2021, 13:38 IST
ಸಾಮಾನ್ಯ ವೀಕ್ಷಕರಾದ ಐ.ಎ.ಎಸ್.ಅಧಿಕಾರಿ ಡಾ.ಮಾಧವಿ ಖೋಡೆ ಚವಾರೆ ಹಾಗೂ ಪೊಲೀಸ್ ವೀಕ್ಷಕರಾದ ಐಪಿಎಸ್ ಅಧಿಕಾರಿ ಮಹೇಶ ಘುರೆ ಬುಧವಾರ ಮತ ಎಣಿಕೆ ಕೇಂದ್ರವಾದ ಹಾವೇರಿ ನಗರದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಸಾಮಾನ್ಯ ವೀಕ್ಷಕರಾದ ಐ.ಎ.ಎಸ್.ಅಧಿಕಾರಿ ಡಾ.ಮಾಧವಿ ಖೋಡೆ ಚವಾರೆ ಹಾಗೂ ಪೊಲೀಸ್ ವೀಕ್ಷಕರಾದ ಐಪಿಎಸ್ ಅಧಿಕಾರಿ ಮಹೇಶ ಘುರೆ ಬುಧವಾರ ಮತ ಎಣಿಕೆ ಕೇಂದ್ರವಾದ ಹಾವೇರಿ ನಗರದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಸಾಮಾನ್ಯ ವೀಕ್ಷಕರಾದ ಐ.ಎ.ಎಸ್. ಅಧಿಕಾರಿ ಡಾ.ಮಾಧವಿ ಖೋಡೆ ಚವಾರೆ ಹಾಗೂ ಪೊಲೀಸ್ ವೀಕ್ಷಕರಾದ ಐಪಿಎಸ್ ಅಧಿಕಾರಿ ಮಹೇಶ ಘುರೆ ಬುಧವಾರ ಹಾನಗಲ್ ಉಪ ಚುನಾವಣೆಯ ಉದ್ದೇಶಿತ ಮತ ಎಣಿಕೆ ಕೇಂದ್ರ ಹಾವೇರಿ ನಗರದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮತ ಎಣಿಕೆಗೆ ಅವಶ್ಯವಾದ ಮತಯಂತ್ರಗಳ ದಾಸ್ತಾನು ಕೊಠಡಿ, ಮತ ಎಣಿಕೆ ಕೊಠಡಿಗಳು, ಮಾಧ್ಯಮ ಕೊಠಡಿ, ಪೊಲೀಸ್ ಕಂಟ್ರೋಲ್ ರೂಂ, ಇಂಟರನೆಟ್ ಸಂಪರ್ಕ, ಭದ್ರತಾ ವ್ಯವಸ್ಥೆಗಳ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್‌ ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ವೀಕ್ಷಕರಿಗೆ ಮಾಹಿತಿ ನೀಡಿದರು.

ADVERTISEMENT

ಹೆಚ್ಚುವರಿ ಜಿಲ್ಲಾಧಿಕಾರಿ ಎನ್. ತಿಪ್ಪೇಸ್ವಾಮಿ, ಎಂಜಿನಿಯರಿಂಗ್‌ ಕಾಲೇಜು ಪ್ರಾಚಾರ್ಯ ಪ್ರಕಾಶ, ಡಿ.ವೈ.ಎಸ್ಪಿ ಶಂಕರ ಮಾರಿಹಾಳ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಂಬಾಬಾ ಮುದ್ದೇಬಿಹಾಳ, ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ತಿಮ್ಮೇಶಕುಮಾರ್‌, ಪೌರಾಯುಕ್ತ ಪರಶುರಾಮ ಚಲವಾದಿ ಹಾಗೂ ತಹಶೀಲ್ದಾರ್‌ ಗಿರೀಶ ಸ್ವಾದಿ ಇದ್ದರು.

ಚುನಾವಣಾ ಆಯೋಗದಿಂದ ನೇಮಕ

ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕೇಂದ್ರ ಸಾಮಾನ್ಯ ವೀಕ್ಷಕರಾಗಿ ಐ.ಎ.ಎಸ್.ಅಧಿಕಾರಿ ಡಾ.ಮಾಧವಿ ಖೋಡೆ ಚವಾರೆ ಚುನಾವಣಾ ವೆಚ್ಚ ವೀಕ್ಷಕರಾಗಿ ಐ.ಆರ್.ಎಸ್. ಅಧಿಕಾರಿ ಗುಲ್ಜಾರ್ ಬೇಗಂ ಹಾಗೂ ಪೊಲೀಸ್ ವೀಕ್ಷರನ್ನಾಗಿ ಐಪಿಎಸ್ ಅಧಿಕಾರಿ ಮಹೇಶ ಘುರೆ ಅವರನ್ನು ಭಾರತ ಚುನಾವಣಾ ಆಯೋಗ ನೇಮಕ ಮಾಡಿದೆ.

ಈಗಾಗಲೇ ಮೂರು ಜನ ವೀಕ್ಷಕರು 82- ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಚುನಾವಣೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಾರ್ವಜನಿಕರು ಹಾನಗಲ್ ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯೂಡಿ) ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 10 ರಿಂದ 11 ಗಂಟೆವರೆಗೆ ಖುದ್ದಾಗಿ ಭೇಟಿ ಮಾಡಬಹುದು. ಅಥವಾ ದೂರವಾಣಿ ಮೂಲಕ ಸಂಪರ್ಕಿಸಬಹುದು.

ಸಾಮಾನ್ಯ ವೀಕ್ಷಕರಾದ ಐ.ಎ.ಎಸ್.ಅಧಿಕಾರಿ ಡಾ.ಮಾಧವಿ ಖೋಡೆ ಚವಾರೆ ಅವರ ಮೊ:80503 23805, ಪೊಲೀಸ್ ವೀಕ್ಷಕರಾದ ಐಪಿಎಸ್ ಅಧಿಕಾರಿ ಮಹೇಶ ಘುರೆ ಅವರ ಮೊ:82172 98478 (ದೂರವಾಣಿ/ ಫ್ಯಾಕ್ಸ್ ನಂ.08379-262240) ಹಾಗೂ ವೆಚ್ಚ ವೀಕ್ಷಕರಾದ ಐ.ಆರ್.ಎಸ್. ಅಧಿಕಾರಿ ಗುಲ್ಜಾರ್ ಬೇಗಂ ಅವರ ಮೊ. 81237 08411 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.