ADVERTISEMENT

ನೀರು ವ್ಯತ್ಯಯ: ಸಹಕರಿಸಲು ಮನವಿ

ನಗರಸಭೆ ಸಿಬ್ಬಂದಿಯಿಂದ ನೀರು ಶುದ್ಧೀಕರಣ ಘಟಕದ ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 16:24 IST
Last Updated 21 ಏಪ್ರಿಲ್ 2021, 16:24 IST
ಹಾವೇರಿಯ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದ ಸಮೀಪವಿರುವ ನೀರು ಶುದ್ಧೀಕರಣ ಘಟಕವನ್ನು ನಗರಸಭೆ ಸಿಬ್ಬಂದಿ ಬುಧವಾರ ಸ್ವಚ್ಛಗೊಳಿಸುವ ಕಾರ್ಯ ಕೈಗೊಂಡರು. ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ ಇದ್ದಾರೆ
ಹಾವೇರಿಯ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದ ಸಮೀಪವಿರುವ ನೀರು ಶುದ್ಧೀಕರಣ ಘಟಕವನ್ನು ನಗರಸಭೆ ಸಿಬ್ಬಂದಿ ಬುಧವಾರ ಸ್ವಚ್ಛಗೊಳಿಸುವ ಕಾರ್ಯ ಕೈಗೊಂಡರು. ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ ಇದ್ದಾರೆ   

ಹಾವೇರಿ: ನಗರದಮುನ್ಸಿಪಲ್ ಹೈಸ್ಕೂಲ್ ಆವರಣದಲ್ಲಿರುವ ನಗರಸಭೆಯ ನೀರು ಶುದ್ಧೀಕರಣ ಘಟಕವು ಕೆಸರು ಮತ್ತು ಹೂಳಿನಿಂದ ತುಂಬಿರುವ ಕಾರಣಕ್ಕೆ ನಗರಸಭೆಯ ಸಿಬ್ಬಂದಿ ಹಾಗೂ 24X7 ಕುಡಿಯುವ ನೀರು ಸರಬರಾಜುಸಿಬ್ಬಂದಿ ಶುದ್ಧೀಕರಣ ಘಟಕದಲ್ಲಿನ ಹೂಳು ಮತ್ತು ಕೆಸರನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಬುಧವಾರ ಕೈಗೊಂಡರು.

ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದ್ದ ನಗರಸಭೆಯ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ‘ಹಲವಾರು ವರ್ಷಗಳಿಂದ ನೀರು ಶುದ್ಧೀಕರಣ ಘಟಕದ ಸ್ವಚ್ಛತೆ ಕೈಗೊಳ್ಳದ ಕಾರಣಕ್ಕೆ ನೀರು ಸರಬರಾಜಿನಲ್ಲಿ ತೊಂದೆರಯಾಗಿತ್ತು. ಹೂಳು ತುಂಬಿರುವ ಕಾರಣಕ್ಕೆ ಸಮರ್ಪಕವಾಗಿ ನೀರು ಶುದ್ಧೀಕರಣವಾಗುತ್ತಿರಲಿಲ್ಲ. ಸ್ವಚ್ಛತಾ ಕಾರ್ಯ ಏ.23ರವರೆಗೆ ನಡೆಯುವುದರಿಂದ ನಗರದ ಜನತೆಗೆ ಮೂರು ದಿನಗಳವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಹಕರಿಸಬೇಕು ಎಂದು ಮನವಿ ಮಾಡಿದರು.

ಹಾಳಾಗಿದ್ದ ನೀರು ಸರಬರಾಜು ವಿಭಾಗದ ಎಲ್ಲ ಯಂತ್ರಗಳನ್ನು ದುರಸ್ತಿಗೊಳಿಸಲಾಗಿದೆ. ನಗರದ ಜನತೆಗೆ ಶುದ್ಧ ನೀರು ಕೊಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಹಾವೇರಿ ನಗರದ ಜನತೆ ಸಹ ಸಾಕಷ್ಟು ಸಹಕಾರ ನೀಡುತ್ತಾ ಬಂದಿದ್ದಾರೆ ಎಂದರು.

ADVERTISEMENT

ಪ್ರಕಾಶ ಹಂದ್ರಾಳ, ಅತಾಉಲ್ಲಾ ಖಾಜಿ, ನೀರು ಸರಬರಾಜು ವಿಭಾಗದ ಎಂಜಿನಿಯರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.