ADVERTISEMENT

ಚಪ್ಪಲಿ ಹೊಲಿಯುವ ರಾಣಿಗೆ ಕೆ.ಇ.ಬಿ ಕಾರ್ಮಿಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 1 ಮೇ 2019, 11:30 IST
Last Updated 1 ಮೇ 2019, 11:30 IST
ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದ ರಸ್ತೆ ಬದಿಯಲ್ಲಿ ಚಮ್ಮಾರಿಕೆ ಮಾಡುತ್ತಿರುವ ರಾಣಿ ಮಚಗಾರ
ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದ ರಸ್ತೆ ಬದಿಯಲ್ಲಿ ಚಮ್ಮಾರಿಕೆ ಮಾಡುತ್ತಿರುವ ರಾಣಿ ಮಚಗಾರ   

ಹಾವೇರಿ: ಕಾರ್ಮಿಕರ ದಿನದ ಅಂಗವಾಗಿ ನಗರದ ಕೆ.ಇ.ಬಿ. ಕಾರ್ಮಿಕರ ನೌಕರರ ಸಂಘವು ಪ್ರತಿ ವರ್ಷ ಪ್ರಶಸ್ತಿ ನೀಡುತ್ತಾ ಬಂದಿದ್ದು, ಈ ಬಾರಿ ಆರು ಕಾರ್ಮಿಕರನ್ನು ಆಯ್ಕೆ ಮಾಡಿದೆ. ಈ ಪೈಕಿ ನಗರದ ಹೊಸಮನಿ ಸಿದ್ದಪ್ಪ ವೃತ್ತದ ರಸ್ತೆ ಬದಿಯಲ್ಲಿ ಚಪ್ಪಲಿ ಹೊಲಿಯುವ(ಚಮ್ಮಾರಿಕೆ) ರಾಣಿ ಅರ್ಜುನ ಮಚಗಾರ ಪ್ರಮುಖರು.

ರಾಣಿ ಅರ್ಜುನ ಮಚಗಾರ ಅವರನ್ನು ಅಸಂಘಟಿತ ಕಾರ್ಮಿಕರ ವಲಯದಿಂದ ಆಯ್ಕೆ ಮಾಡಲಾಗಿದೆ. ಪುದುಚೇರಿ ಪ್ರಾನ್ಸಿಯ ಗೋರಿ ಮೂಡಿ ಗ್ರಾಮದ ಸೆಲ್ವರಾಜ ಮತ್ತು ವೀರಮ್ಮ ದಂಪತಿ ಮಗಳು. 9ನೇ ತರಗತಿ ತನಕ ಓದಿದ್ದಾರೆ. 1984ರಲ್ಲಿ ಪುದುಚೇರಿಯಿಂದ ಬಂದು, ತಮಿಳುನಾಡಿನ ಅರ್ಜುನ ಅವರನ್ನು ಬೆಂಗಳೂರಿನಲ್ಲಿ ವಿವಾಹವಾದರು. ಪತಿ ಅರ್ಜುನ ನಗರಸಭೆ ಜನಾನುರಾಗಿ ಕಾರ್ಮಿಕರು
ಹಾಗೂ ಕಲಾವಿದರಾಗಿದ್ದಾರೆ.

‘ನಮ್ಮ ಕೈಕಾಲುಗಳೇ ದುಡಿಯುವ ಆಳುಗಳು’ ಎನ್ನುವ ರಾಣಿ ಅರ್ಜುನ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ನಮಗೂ ಹೆಮ್ಮೆ ಎನ್ನುತ್ತಾರೆ ಸಂಘದ ವಿಜಯಕುಮಾರ ಮುದಕಣ್ಣನವರ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.