ಬೆಂಗಳೂರು: ಯಲಹಂಕ ವಲಯ ವ್ಯಾಪ್ತಿಯ ಜಕ್ಕೂರು ಕೆರೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದರು.
110 ಎಕರೆ ವ್ಯಾಪ್ತಿಯ ಜಕ್ಕೂರು ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮುಖ್ಯ ಆಯುಕ್ತರು, ’ಅಮೃತ ನಗರೋತ್ಥಾನ ಯೋಜನೆಯಡಿ ₹1.10 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತದೆ. ತುರ್ತು ಕಾಮಗಾರಿಗಳ ಯೋಜನೆ ರೂಪಿಸಿಕೊಂಡು ಕ್ರಮ ಕೈಗೊಳ್ಳಿ‘ ಎಂದು ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್ ಮೋಹನ್‌ಕೃಷ್ಣ ಅವರಿಗೆ ಆದೇಶಿಸಿದರು.
ತಜ್ಞರೊಂದಿಗೆ ಸಮಾಲೋಚಿಸಿ ವೆಟ್‌ಲ್ಯಾಂಡ್, ಶೌಚಾಲಯ ನವೀಕರಣ, ಒಳಹರಿವಿನ ಸುಧಾರಣೆ ಮತ್ತು ಒಳಹರಿವಿನ ಭಾಗಕ್ಕೆ ಫೆನ್ಸಿಂಗ್, ಜಲಪೋಷಣ ಸಂಘದವರ ಕೋರಿಕೆಯಂತೆ ವಾಚ್ ಟವರ್ ಹಾಗೂ ಮಾಹಿತಿ ಕೇಂದ್ರ ಸ್ಥಾಪಿಸಲು ಸೂಚಿಸಿದರು.
ವಲಯ ಜಂಟಿ ಆಯುಕ್ತರಾದ ಪೂರ್ಣಿಮಾ, ವಲಯ ಮುಖ್ಯ ಎಂಜಿನಿಯರ್ ರಂಗನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.