ADVERTISEMENT

ಕಲಬುರ್ಗಿ: ಕೋವಿಡ್‌ನಿಂದ 11 ಜನ ಸಾವು

ಶಾಸಕ ಮತ್ತಿಮೂಡಗೆ ಮತ್ತೆ ಕೋವಿಡ್

​ಪ್ರಜಾವಾಣಿ ವಾರ್ತೆ
Published 9 ಮೇ 2021, 4:35 IST
Last Updated 9 ಮೇ 2021, 4:35 IST
ಕಲಬುರ್ಗಿಯ ಜಿಮ್ಸ್ ಆವರಣದ ಟ್ರಾಮಾ ಸೆಂಟರ್‌ನಲ್ಲಿ ಆರಂಭಿಸಿರುವ ಕೋವಿಡ್‌ ಆಸ್ಪತ್ರೆಗೆ ರೋಗಿಗಳನ್ನು ಕರೆತಂದ ಆಂಬುಲೆನ್ಸ್‌ಗೆ ಯುವಕ ಸ್ಯಾನಿಟೈಸರ್ ಸಿಂಪಡಿಸಿದ ದೃಶ್ಯ
ಕಲಬುರ್ಗಿಯ ಜಿಮ್ಸ್ ಆವರಣದ ಟ್ರಾಮಾ ಸೆಂಟರ್‌ನಲ್ಲಿ ಆರಂಭಿಸಿರುವ ಕೋವಿಡ್‌ ಆಸ್ಪತ್ರೆಗೆ ರೋಗಿಗಳನ್ನು ಕರೆತಂದ ಆಂಬುಲೆನ್ಸ್‌ಗೆ ಯುವಕ ಸ್ಯಾನಿಟೈಸರ್ ಸಿಂಪಡಿಸಿದ ದೃಶ್ಯ   

ಕಲಬುರ್ಗಿ: ಕೋವಿಡ್‌ನಿಂದ ಜಿಲ್ಲೆಯಲ್ಲಿ ಮತ್ತೆ 11 ಮಂದಿ ಮೃತಪಟ್ಟಿದ್ದಾರೆ ಎಂದು ಶನಿವಾರದ ಆರೋಗ್ಯ ಇಲಾಖೆಯ ಬುಲೆಟಿನ್‌ ತಿಳಿಸಿದೆ.

ಕಲಬುರ್ಗಿ ಗಂಜ್‌ನ ಅಯ್ಯರವಾಡಿಯ 51 ವರ್ಷದ ಪುರುಷ, ವೀರೇಂದ್ರ ಪಾಟೀಲ ನಗರದ 30 ವರ್ಷದ ಯುವಕ, ಶಹಾಬಜಾರ್‌ನ 52 ವರ್ಷದ ಪುರುಷ, ಶಿವಾಜಿ ನಗರದ 80 ವರ್ಷದ ವೃದ್ಧ, ಎಂಎಸ್‌ಕೆ ಮಿಲ್‌ನ 68 ವರ್ಷದ ಪುರುಷ, ಸೇಡಂನ ಹಾಬಳ–ಟಿಯ 65 ವರ್ಷದ ವೃದ್ಧ, ಅಫಜಲಪುರದ ಶಿವಪುರದ 35 ವರ್ಷದ ಯುವಕ, ಆಳಂದ ತಾಲ್ಲೂಕು ಹಳ್ಳಿ ಸಲಗರ ಗ್ರಾಮದ 48 ವರ್ಷದ ಪುರುಷ, ಆಳಂದದ ಬ್ರಾಹ್ಮಣ ಗಲ್ಲಿಯ 41 ವರ್ಷದ ಮಹಿಳೆ, ಜ್ಯೋತಿಬಾ ಫುಲೆ ನಗರದ 45 ವರ್ಷದ ಮಹಿಳೆ, ಪಡಸಾವಳಿಯ 65 ವರ್ಷದ ವೃದ್ಧ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ 1261 ಜನರಿಗೆ ಮತ್ತೆ ಸೋಂಕು ಇರುವುದು ದೃಢಪಟ್ಟಿದ್ದು, 652 ಜನ ಗುಣಮುಖರಾಗಿದ್ದಾರೆ.

ADVERTISEMENT

ಶಾಸಕ ಮತ್ತಿಮೂಡಗೆ ಮತ್ತೆ ಕೋವಿಡ್
ಇತ್ತೀಚೆಗಷ್ಟೇ ಕೋವಿಡ್‌ ದೃಢಪಟ್ಟು ಹೈದರಾಬಾದ್‌ನಲ್ಲಿ ಚಿಕಿತ್ಸೆ ಪಡೆದು ವಾಪಸಾಗಿದ್ದ ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರಿಗೆ ಮತ್ತೆ ಕೋವಿಡ್‌ ದೃಢಪಟ್ಟಿದೆ. ಅಲ್ಲದೇ, ಅವರ ಪತ್ನಿ ಜಯಶ್ರೀ ಮತ್ತಿಮೂಡ ಹಾಗೂ ಪುತ್ರಿಗೂ ಸೋಂಕು ಇರುವುದು ಗೊತ್ತಾಗಿದೆ. ಸದ್ಯಕ್ಕೆ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.