ADVERTISEMENT

ಟಿಇಟಿ ಪರೀಕ್ಷೆ ಬರೆದ 16581 ಅಭ್ಯರ್ಥಿಗಳು, 47 ಕೇಂದ್ರಗಳಲ್ಲಿ ಸುಸೂತ್ರ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 13:24 IST
Last Updated 4 ಅಕ್ಟೋಬರ್ 2020, 13:24 IST
ಕಲಬುರ್ಗಿಯ ಅಂಬೇಡ್ಕರ್ ಕಾಲೇಜಿನಲ್ಲಿ ಟಿಇಟಿ ಪರೀಕ್ಷೆ ಆರಂಭಕ್ಕೂ ಮುನ್ನ ಸಿಬ್ಬಂದಿಯೊಬ್ಬರು ಅಭ್ಯರ್ಥಿಗಳನ್ನು ಹಾಲ್‌ಟಿಕೆಟ್‌ಗಳನ್ನು ಪರಿಶೀಲಿಸಿದರು
ಕಲಬುರ್ಗಿಯ ಅಂಬೇಡ್ಕರ್ ಕಾಲೇಜಿನಲ್ಲಿ ಟಿಇಟಿ ಪರೀಕ್ಷೆ ಆರಂಭಕ್ಕೂ ಮುನ್ನ ಸಿಬ್ಬಂದಿಯೊಬ್ಬರು ಅಭ್ಯರ್ಥಿಗಳನ್ನು ಹಾಲ್‌ಟಿಕೆಟ್‌ಗಳನ್ನು ಪರಿಶೀಲಿಸಿದರು   

ಕಲಬುರ್ಗಿ: ನಗರದ 47 ಪರೀಕ್ಷಾ ಕೇಂದ್ರಗಳಲ್ಲಿ 16581 ಅಭ್ಯರ್ಥಿಗಳು ಭಾನುವಾರ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯನ್ನು ಬರೆದರು.

ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12ರವರೆಗೆ ಡಿ.ಇಡಿ ಪದವೀಧರರಿಗಾಗಿ ಟಿಇಟಿ ಪರೀಕ್ಷೆ ನಡೆಯಿತು. ಒಟ್ಟಾರೆ 5303 ಅಭ್ಯರ್ಥಿಗಳ ಪೈಕಿ 4264 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾದರು. 1039 ಜನ ಗೈರಾಗಿದ್ದರು.

ಮಧ್ಯಾಹ್ನ ಬಿ.ಇಡಿ. ಪದವೀಧರರಿಗಾಗಿ ನಡೆದ ಪರೀಕ್ಷೆಯಲ್ಲಿ 13,858 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಅವರ ಪೈಕಿ 12,317 ಅಭ್ಯರ್ಥಿಗಳು ಹಾಜರಾಗಿದ್ದರು. 1541 ಜನ ಗೈರಾಗಿದ್ದರು ಎಂದು ಪರೀಕ್ಷೆಯ ಮೇಲುಸ್ತುವಾರಿ ವಹಿಸಿದ್ದ ಡಿಡಿಪಿಐ ಎಸ್‌.ಪಿ.ಬಾಡಗಂಡಿ ತಿಳಿಸಿದರು.

ADVERTISEMENT

ರಾಜ್ಯದಲ್ಲೇ ಅತ್ಯಂತ ಹೆಚ್ಚು ಜನ ಅಭ್ಯರ್ಥಿಗಳು ಇಲ್ಲಿ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದರು. ಅತಿ ಹೆಚ್ಚು ಪರೀಕ್ಷಾ ಕೇಂದ್ರಗಳು ಇಲ್ಲಿಯೇ ಇದ್ದವು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.