ಕಲಬುರ್ಗಿ: ಏಳು ತಿಂಗಳ ಮಗುವೂ ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರ ಒಟ್ಟು 53 ಮಂದಿಗೆ ಕೋವಿಡ್–19 ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಒಟ್ಟು ಸಂಖ್ಯೆ 1699ಕ್ಕೆ ಏರಿದೆ. 27 ಮಂದಿ ಈವರೆಗೆ ಮೃತಪಟ್ಟಿದ್ದು, 362 ಮಂದಿಗೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸೋಂಕಿತರಲ್ಲಿ 23 ಮಹಿಳೆಯರು, 30 ಪುರುಷರು ಇದ್ದಾರೆ. ಇವರಲ್ಲಿ ಏಳು ತಿಂಗಳ ಮಗುವಿಗೆ ಕೋವಿಡ್ ಸೋಂಕಿತನ ನೇರ ಸಂಪರ್ಕದ ಕಾರಣ ಪಾಸಿಟಿವ್ ಬಂದಿದೆ. ಅಲ್ಲದೇ, 2 ವರ್ಷ, 7 ಹಾಗೂ 10 ವರ್ಷದ ಮೂವರು ಬಾಲಕರೂ ಇದ್ದಾರೆ. 5 ವರ್ಷ, 7, 14,. 15 ಹಾಗೂ 16 ವರ್ಷದ ನಾಲ್ವರು ಬಾಲಕಿಯರಿಗೆ ಸೋಂಕು ಅಂಟಿಕೊಂಡಿದೆ. ಉಳಿದಂತೆ 60 ವರ್ಷ ಮೇಲ್ಪಟ್ಟ ನಾಲ್ವರನ್ನೂ ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ.
ಸೋಂಕಿತರಲ್ಲಿ ಕಲಬುರ್ಗಿ ನಗರದ 14 ಮಂದಿಗೆ ಸೋಂಕಿತರ ನೇರ ಸಂಪರ್ಕದಿಂದ ವೈರಾಣು ಅಂಟಿಕೊಂಡಿದೆ. ಮಹಾರಾಷ್ಟ್ರರಿಂದ ಮರಳಿದ 15, ತೆಲಂಗಾಣ ಹಾಗೂ ಅಂತರ್ ಜಿಲ್ಲಾ ಪ್ರವಾಸ ಕೈಗೊಂಡ ತಲಾ ಒಬ್ಬರು ಇದ್ದಾರೆ. ಒಬ್ಬರಲ್ಲಿ ತೀವ್ರ ಉಸಿರಾಟದ ತೊಂದರೆ, 9 ಮಂದಿಯಲ್ಲಿ ವಿಷಮಶೀತ ಜ್ವರ ಕಾಣಿಸಿಕೊಂಡಿದೆ. ಉಳಿದಂತೆ 12 ಮಂದಿಗೆ ಯಾರಿಂದ ಸೋಂಕು ಅಂಟಿಕೊಂಡಿತು ಎಂದು ಪತ್ತೆಯಾಗಿಲ್ಲ.
69 ಮಂದಿ ಗುಣಮುಖ:ಸೋಮವಾರ ಒಂದೇ ದಿನ 69 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ಸೋಂಕು ಜಯಿಸಿದವರ ಸಂಖ್ಯೆ 1310ಕ್ಕೆ ಏರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.