ADVERTISEMENT

ಅಪರಿಚಿತ ವಾಹನ ಡಿಕ್ಕಿ: ಮಹಿಳಾ ಕಾನ್ ಸ್ಟೆಬಲ್ ಗೆ ಗಾಯ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2020, 7:02 IST
Last Updated 20 ಏಪ್ರಿಲ್ 2020, 7:02 IST

ಕಲಬುರ್ಗಿ: ನಗರದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದರಿಂದ ನಗರದ ವಿಶ್ವವಿದ್ಯಾಲಯ ಠಾಣೆ ಮಹಿಳಾ ‌ಪೊಲೀಸ್ ಕಾನ್ ಸ್ಟೆಬಲ್ ರೇಣುಕಾ ಎಂಬುವವರು ಗಾಯಗೊಂಡಿದ್ದಾರೆ.

ನಸುಕಿನ ಜಾವ ಸ್ಕೂಟರ್ ‌ಮೇಲೆ ತೆರಳುತ್ತಿದ್ದ ವೇಳೆ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ.

ಪ್ರಜ್ಞೆ ತಪ್ಪಿದ್ದ ಅವರನ್ನು ಪೊಲೀಸರು ಹಾಗೂ ‌ಆಂಬುಲೆನ್ಸ್ ಸಿಬ್ಬಂದಿ ನಗರದ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಿದರು.

ADVERTISEMENT

ರೇಣುಕಾ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವಿಶ್ವವಿದ್ಯಾಲಯ ಠಾಣೆ ಪೊಲೀಸ್ ಇನ್ ಸ್ಪೆಕ್ಟರ್ ಸಂಗಮನಾಥ ಹಿರೇಮಠ ‌ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.