ADVERTISEMENT

ಅಫಜಲಪುರ: ಸೂರ್ಯ ನಮಸ್ಕಾರ ಅಭಿಯಾನ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 6:56 IST
Last Updated 15 ಜನವರಿ 2022, 6:56 IST
ಅಫಜಲಪುರ ತಾಲ್ಲೂಕಿನ ಬಳೂರ್ಗಿ ಗ್ರಾಮದ ಆಯುಷ್ಯ ಕೇಂದ್ರದಲ್ಲಿ ಶುಕ್ರವಾರ ಸೂರ್ಯ ನಮಸ್ಕಾರ ಅಭಿಯಾನ ನಡೆಯಿತು. ವೈದ್ಯಾಧಿಕಾರಿ ಶ್ರೀಶೈಲ ಪಾಟೀಲ, ಯೋಗ ಶಿಕ್ಷಕಿ ಪ್ರಬಾವತಿ ಮೇತ್ರೆ ಇದ್ದರು
ಅಫಜಲಪುರ ತಾಲ್ಲೂಕಿನ ಬಳೂರ್ಗಿ ಗ್ರಾಮದ ಆಯುಷ್ಯ ಕೇಂದ್ರದಲ್ಲಿ ಶುಕ್ರವಾರ ಸೂರ್ಯ ನಮಸ್ಕಾರ ಅಭಿಯಾನ ನಡೆಯಿತು. ವೈದ್ಯಾಧಿಕಾರಿ ಶ್ರೀಶೈಲ ಪಾಟೀಲ, ಯೋಗ ಶಿಕ್ಷಕಿ ಪ್ರಬಾವತಿ ಮೇತ್ರೆ ಇದ್ದರು   

ಅಫಜಲಪುರ: ತಾಲ್ಲೂಕಿನ ಬಳೂರ್ಗಿ ಗ್ರಾಮದ ಆಯುಷ್ಯ ಆರೋಗ್ಯ ಮತ್ತು ಕ್ಷೇಮ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಸೂರ್ಯನಮಸ್ಕಾರ ಅಭಿಯಾನ ನಡೆಯಿತು.

ವೈದ್ಯಾಧಿಕಾರಿ ಶ್ರೀಶೈಲ ಪಾಟೀಲ ಮಾತನಾಡಿ, ಸೂರ್ಯ ನಮಸ್ಕಾರ, ಪ್ರಾಣಾಯಾಮ ನಿಯಮಿತವಾಗಿ ಮಾಡಿದರೆ, ಆರೋಗ್ಯಯುತ ಜೀವನ ನಡೆಸಬಹುದು. ರೋಗದಿಂದ ದೂರ ಇರಬಹುದು, ಈಗಾಗಲೇ ಬಳೂರ್ಗಿ ಆಯುಷ್ಯ ಆರೋಗ್ಯ ಕ್ಷೇಮ ಕೇಂದ್ರದಲ್ಲಿ ನಿತ್ಯ ಯೋಗ ಶಿಬಿರ ನಡೆಸಲಾಗುತ್ತದೆ. ಹೆಚ್ಚಿನ ಜನರು ಭಾಗಹಿಸುತ್ತಾರೆ ಎಂದು ತಿಳಿಸಿದರು.

ಪಟ್ಟಣದ ಅಂಬೇಡ್ಕರ ಭವನ, ಸರ್ಕಾರಿ ಪ್ರೌಢಶಾಲೆ ತೆಲ್ಲೂರ ಎರಡು ಕಡೆ ಸೂರ್ಯ ನಮಸ್ಕಾರ ಅಭಿಯಾನ ಏರ್ಪಡಿಸಲಾಗಿತ್ತು ಎಂದು ಅವರು ತಿಳಿಸಿದರು.

ADVERTISEMENT

ಯೋಗ ಶಿಕ್ಷಕಿ ಶ್ರೀಮತಿ ಪ್ರಬಾವತಿ ಮೇತ್ರೆ ಮಾತನಾಡಿ, ಪ್ರತಿಯೊಬ್ಬರು ಯೋಗ ಅಭ್ಯಾಸವನ್ನು ಅಳವಡಿಸಿಕೊಳ್ಳಬೇಕು. ಒತ್ತಡದ ಜೀವನ ಶೈಲಿಯಲ್ಲಿ ಪ್ರತಿಯೊಬ್ಬರಿಗೂ ಯೋಗ ಅವಶ್ಯಕತೆಯಾಗಿದೆ. ಯೋಗದಿಂದ ಮನಸ್ಸು ಶಾಂತವಾಗುತ್ತದೆ, ಯಾವುದೇ ಕಾಯಿಲೆಗಳು ಹತ್ತಿರ ಬರುವದಿಲ್ಲ ಎಂದರು. ಪ್ರಾಣಾಯಾಮ, ಯೋಗ ನಮಸ್ಕಾರ ಮಾಡುವದರಿಂದ ದೊರೆಯುವ ಲಾಭಗಳ ಬಗ್ಗೆ ಹೇಳಿಕೊಟ್ಟರು.

ಕಾರ್ಯಕ್ರಮದಲ್ಲಿ ಯೋಗ ಸಹ ಶಿಕ್ಷಕರಾದ ಮಹೇಶ ಚಲಗೇರಿ ಹಾಗೂ ಶಿವಯ್ಯ ಗುಂಡಯ್ಯ ಗುತ್ತೇದಾರ, ಮನೋಹರ ರಾಠೋಡ, ಶ್ರೀಶೈಲ ಮೇತ್ರಿ, ಪ್ರತಿಭಾ ಮಹೇಂದ್ರಕರ, ವಿರೇಶ ಹಿರೇಮಠ, ರಾಜು ಗುತ್ತೇದಾರ, ಬಾಳಪ್ಪ ಚಲಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.