ADVERTISEMENT

ಆಕಾಶವಾಣಿ ಸ್ಪರ್ಧೆ: ಕಲಬುರ್ಗಿ ಕೇಂದ್ರಕ್ಕೆ ಎರಡು ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 10:10 IST
Last Updated 8 ನವೆಂಬರ್ 2019, 10:10 IST
ರಾಜೇಂದ್ರ ಕುಲಕರ್ಣಿ
ರಾಜೇಂದ್ರ ಕುಲಕರ್ಣಿ   

ಕಲಬುರ್ಗಿ:ಆಕಾಶವಾಣಿಯ ರಾಜ್ಯ ಮಟ್ಟದ 2019ನೇ ಸಾಲಿನ ವಾರ್ಷಿಕ ಸ್ಪರ್ಧೆಯಲ್ಲಿ ಕಲಬುರ್ಗಿ ಆಕಾಶವಾಣಿ ಕೇಂದ್ರದ ನಾಟಕಕ್ಕೆ ಪ್ರಥಮ ಬಹುಮಾನ ಹಾಗೂ ಕೇಂದ್ರ ಸರ್ಕಾರದ ‘ಪೋಷಣ್ ಅಭಿಯಾನ’ದ ಕಾರ್ಯಕ್ರಮಕ್ಕೆ ದ್ವಿತೀಯ ಬಹುಮಾನ ಲಭಿಸಿದೆ.

‘ನಾಯಿಬಾಲಾ ಡೊಂಕೆ’ ಎಂಬ ನಾಟಕ ಈ ಮಹತ್ವದ ವಿಷಯದ ಮೇಲೆ ಬೆಳಕು ಚೆಲುತ್ತದೆ. ಅಲ್ಲದೇ ಮೂಢನಂಬಿಕೆಗಳನ್ನು ಮೆಟ್ಟಿ ನಿಲ್ಲುವಲ್ಲಿ ಪ್ರೇರಣೆ ನೀಡುತ್ತದೆ. ಧಾರವಾಡ ಕೃಷಿ ವಿದ್ಯಾಲಯದ ಪಶು ತಜ್ಞ ಡಾ. ಅನಿಲ್‍ಕುಮಾರ್ ಮುಗಳಿ ಈ ನಾಟಕದ ಕರ್ತೃ. ನಾಟಕವನ್ನು ರಾಜೇಂದ್ರ ಆರ್ ಕುಲಕರ್ಣಿ ಹಾಗೂ ಸೋಮಶೇಖರ ಎಸ್ ರುಳಿ ನಿರ್ಮಾಣ ಮಾಡಿದ್ದರು. ಶೋಭಾ ಎನ್ ವಕೀಲ ಸಂಕಲನ ನೆರವು ನೀಡಿದ್ದರು.

ಕೇಂದ್ರ ಸರ್ಕಾರದ ಯೋಜನೆಗಳಿಗೆ ಕೊಡಮಾಡುವ ‘ಪೋಷಣ್ ಅಭಿಯಾನ’ ವಿಭಾಗದಲ್ಲಿ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ ಪ್ರಸ್ತುತಪಡಿಸಿದ ಕಾರ್ಯಕ್ರಮಕ್ಕೆ ಎರಡನೇ ಬಹುಮಾನ ಲಭಿಸಿದೆ. ಆಹಾರಗಳಲ್ಲಿ ಪೌಷ್ಠಿಕಾಂಶ ಕೊರತೆಯಿಂದ ಅಪೌಷ್ಠಿಕ ಸಮಸ್ಯೆ ಎದುರಾಗುತ್ತಿದ್ದು ಆಹಾರದಲ್ಲಿ ಪೌಷ್ಠಿಕ ಬಳಕೆಗಾಗಿ ಜಾಗೃತಿ ಮೂಡಿಸಲು ‘ಪೋಷಣ ಅಭಿಯಾನ’ ಪಾಕ್ಷಿಕದ ಸಂದರ್ಭದಲ್ಲಿ ಕಲಬುರ್ಗಿ ಆಕಾಶವಾಣಿಯೂ ಪೌಷ್ಠಿಕದಲ್ಲಿ ಕಲಬುರ್ಗಿ ಆಕಾಶವಾಣಿ ಬಿತ್ತರಿಸಿದ ವಿಶೇಷ ಸಂದರ್ಶನ ಕಾರ್ಯಕ್ರಮವನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆಹಾರ ತಜ್ಞೆ ಡಾ.ಶೀಲಾ ಸಿದ್ದರಾಮ ಹಾಗೂ ಪ್ರಸೂತಿ ತಜ್ಞೆ ಡಾ.ಮೀತಾ ಅಂಗಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಲ್ಲಮ್ಮ ಟಿ. ಬುಳ್ಳಾ ಸಂಕಲನ ನೆರವು ನೀಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.