ADVERTISEMENT

ಆಳಂದ | ಸಂವಿಧಾನದಿಂದ ಸಮ ಸಮಾಜ ನಿರ್ಮಾಣ: ಸುಭಾಷ ಗುತ್ತೇದಾರ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 4:48 IST
Last Updated 6 ಜನವರಿ 2026, 4:48 IST
ಆಳಂದದಲ್ಲಿ ದಲಿತ ಸೇನೆಯಿಂದ ಭೀಮಾ ಕೋರೇಗಾಂವ ವಿಜಯೋತ್ಸವ ಕಾರ್ಯಕ್ರಮ ಜರುಗಿತು. ಸುಭಾಷ ಗುತ್ತೇದಾರ, ಹಣಮಂತ ಯಳಸಂಗಿ, ಸಿದ್ದರಾಮ ಪ್ಯಾಟಿ, ಪಿಂಟು ಸಾಲೇಗಾಂವ ಉಪಸ್ಥಿತರಿದ್ದರು
ಆಳಂದದಲ್ಲಿ ದಲಿತ ಸೇನೆಯಿಂದ ಭೀಮಾ ಕೋರೇಗಾಂವ ವಿಜಯೋತ್ಸವ ಕಾರ್ಯಕ್ರಮ ಜರುಗಿತು. ಸುಭಾಷ ಗುತ್ತೇದಾರ, ಹಣಮಂತ ಯಳಸಂಗಿ, ಸಿದ್ದರಾಮ ಪ್ಯಾಟಿ, ಪಿಂಟು ಸಾಲೇಗಾಂವ ಉಪಸ್ಥಿತರಿದ್ದರು   

ಆಳಂದ: ‘ಬುದ್ಧ, ಬಸವಣ್ಣ ಹಾಗೂ ಬಿ.ಆರ್.‌ಅಂಬೇಡ್ಕರ್‌ ಅವರ ಚಿಂತನೆಗಳಿಂದ ಕೂಡಿದ ಸಂವಿಧಾನದಿಂದ ಸಮಸಮಾಜ ನಿರ್ಮಾಣದ ಸಂಕಲ್ಪವಾಗಿದೆ’ ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ತಿಳಿಸಿದರು.

ಪಟ್ಟಣದ ಬುದ್ಧದಿಕ್ಷಾ ಭೂಮಿಯಲ್ಲಿ ಸೋಮವಾರ ಆಳಂದ ತಾಲ್ಲೂಕು ದಲಿತ ಸೇನೆವತಿಯಿಂದ ಏರ್ಪಡಿಸಿದ 208ನೇ ಭೀಮಾ ಕೋರೆಗಾಂವ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಅಧ್ಯಕ್ಷತೆವಹಿಸಿ ಮಾತನಾಡಿ, ‘ಬಿ.ಆರ್. ಅಂಬೇಡ್ಕರ್‌ ಅವರ ಹೋರಾಟಕ್ಕೆ ಭೀಮಾ ಕೋರೆಗಾಂವ ಘಟನೆಯು ಪ್ರೇರಣೆ ನೀಡಿತ್ತು, ಅಂದಿನ ಪೇಶ್ವೆ ಆಡಳಿತದ ವಿರುದ್ದ ವಿಜಯ ಸಾಧಿಸಿದ ಈ ದಿನವು ಶೋಷಿತ ಸಮುದಾಯಗಳ ವಿಜಯೋತ್ಸವವಾಗಿದೆ’ ಎಂದರು.

ADVERTISEMENT

ಉಪನ್ಯಾಸಕ ಜಿತೇಂದ್ರ ತಳವಾರ ಮಾತನಾಡಿ, ‘‍ದೌರ್ಜನ್ಯದ ವಿರುದ್ಧ ಶೋಷಿತರ ದಿಗ್ವಿಜಯವಾಗಿರುವ 1818ರ ಜ.1ರಂದು ನಡೆದ ಭೀಮಾ ಕೋರೆಗಾಂವ ಗೆಲವು ಇತಿಹಾಸದಲ್ಲಿ ಯಾರೂ ದಾಖಲಿಸಲಿಲ್ಲ, ಅಂಬೇಡ್ಕರ್‌ ಅವರು ಪ್ರತಿ ವರ್ಷ ಈ ಸ್ಥಳಕ್ಕೆ ಭೇಟಿ ಗೌರವ ಸಲ್ಲಿಸುತ್ತಿದ್ದರು’ ಎಂದರು.

ಜಿಪಂ ಸದಸ್ಯ ಸಿದ್ದರಾಮ ಪ್ಯಾಟಿ, ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಬಂಡಾರಿ ಮಾತನಾಡಿದರು.

ತಾಲ್ಲೂಕಾಧ್ಯಕ್ಷ ಪಿಂಟು ಸಾಲೇಗಾಂವ, ಮುಖಂಡರಾದ ಸಂತೋಷ ಹಾದಿಮನಿ, ಆನಂದ ಗಾಯಕವಾಡ, ಶಿವಪುತ್ರ ನಡಗೇರಿ, ಶ್ರೀಮಂತರಾವ ಜಿಡ್ಡೆ ,ಲಕ್ಷ್ಮಣ ಝಳಕಿ, ಸುನೀಲ ಹಿರೋಳ್ಳಿಕರ್‌, ದಿಲೀಪ ಕ್ಷೀರಸಾಗರ, ಕಿಟ್ಟಿ ಸಾಲೇಗಾಂವ, ಪಿಂಟು ಭದ್ರೆ, ಗೌತಮ ಕಾಂಬಳೆ, ಅಪ್ಪು ಗೋಪಾಳೆ, ಆಕಾಶ ಬಂಗರಗಾ, ಸಾಗರ ಗುಳಗಿ, ರಾಘವೇಂದ್ರ ಹೆಬಳೆ, ಪ್ರಣವ ಡೋಲೆ ಉಪಸ್ಥಿತರಿದ್ದರು. ನಂತರ ಪಟ್ಟಣದ ಮುಖ್ಯಬೀದಿಗಳಲ್ಲಿ ವಿಜಯೋತ್ಸವದ ಮೆರವಣಿಗೆಯು ಸಂಭ್ರಮದಿಂದ ಜರುಗಿತು.

ಆಳಂದದಲ್ಲಿ ದಲಿತ ಸೇನೆಯಿಂದ ಭೀಮಾ ಕೋರೇಗಾಂವ ವಿಜಯೋತ್ಸವ ಕಾರ್ಯಕ್ರಮ ಜರುಗಿತು. ಸುಭಾಷ ಗುತ್ತೇದಾರ ಹಣಮಂತ ಯಳಸಂಗಿ ಸಿದ್ದರಾಮ ಪ್ಯಾಟಿ ಪಿಂಟು ಸಾಲೇಗಾಂವ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.