ಸಾಂದರ್ಭಿಕ ಚಿತ್ರ
ಕಲಬುರಗಿ: ಅವಹೇಳನಕಾರಿ ಪದ ಬಳಸಿ ಜಾತಿ ನಿಂದನೆ ಮಾಡಿರುವ ಆರೋಪದಡಿ ಜೇವರ್ಗಿ ಪೊಲೀಸ್ ಠಾಣೆಯಲ್ಲಿ 19 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಜೇವರ್ಗಿ ತಾಲ್ಲೂಕಿನ ನರಿಬೋಳದ ನಿವಾಸಿಗಳಾದ ಬಸವರಾಜ ಶಿವಲಿಂಗಪ್ಪಗೌಡ, ವೀರೇಶ ಶಿವಲಿಂಗಪ್ಪ ಗೌಡ ಕುಮ್ಮಕ್ಕಿನಿಂದಾಗಗಿ ಮಲ್ಲಿಕಾರ್ಜುನ ಅರವಿಂದ, ನಿರ್ಮಲಾ ಮಲ್ಲಿಕಾರ್ಜುನ, ಅಂಬವ್ವ ಮಲ್ಲಿಕಾರ್ಜುನ ಗೊಳೆ, ದೇವಕಿ ಸೇರಿ 19 ಮಂದಿ ಜಾತಿ ನಿಂದನೆ ಮಾಡಿ, ದಬ್ಬಾಳಿಕೆ ನಡೆಸಿದ್ದಾರೆ. ಜೀವ ಬೆದರಿಕೆ ಹಾಕಿ, ಸುಮಾರು 100 ಚೀಲ ಜೋಳದ ರಾಶಿ ಮಾಡಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ಮರೆಣ್ಣ ತಿಪ್ಪಣ್ಣ ತಳವಾರ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.