ADVERTISEMENT

ಅಣಿವೀರಭದ್ರೇಶ್ವರ ರಥೋತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:25 IST
Last Updated 8 ಮೇ 2025, 15:25 IST

ಕಾಳಗಿ: ತಾಲ್ಲೂಕಿನ ಹೆಬ್ಬಾಳ ಗ್ರಾಮದ ಅಣಿವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ (ಮೇ.9) ರಾತ್ರಿ 8 ಗಂಟೆಗೆ ರಥೋತ್ಸವ ಜರುಗಲಿದೆ.

ಬೆಳಿಗ್ಗೆ ದೇವರ ಗಂಗಾಭಿಷೇಕ, ದೇವರ ಪಲ್ಲಕ್ಕಿ, ನಂದಿ ಧ್ವಜದ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು. ಶನಿವಾರ (ಮೇ.10) ಬೆಳಿಗ್ಗೆ 8 ಗಂಟೆಗೆ ಜಂಗಿ ಕುಸ್ತಿಗಳು ನಡೆಯಲಿವೆ. ಜಾತ್ರೆಗೆ ಬರಲು ಕಲಬುರಗಿ-ಹೆಬ್ಬಾಳ-ಕಾಳಗಿ ನಡುವೆ ಬಸ್ಸಿನ ಸೌಕರ್ಯ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT