ADVERTISEMENT

ಜೇವರ್ಗಿ | 8 ನಕಲಿ ವೈದ್ಯರ ಮೇಲೆ ದಾಳಿ: ಆಸ್ಪತ್ರೆ ಬಂದ್ ಮಾಡಿಸಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 13:58 IST
Last Updated 8 ಜನವರಿ 2024, 13:58 IST
೦೮ಜೆವಿಜಿ೦೧: ಜೇವರ್ಗಿ: ತಾಲ್ಲೂಕಿನಲ್ಲಿ ನಕಲಿ ವೈದ್ಯರ ಮೇಲೆ ದಾಳಿ ಆಸ್ಪತ್ರೆಗಳು ಬಂದ್ ಮಾಡಿಸಿದ ಅಧಿಕಾರಿಗಳು
೦೮ಜೆವಿಜಿ೦೧: ಜೇವರ್ಗಿ: ತಾಲ್ಲೂಕಿನಲ್ಲಿ ನಕಲಿ ವೈದ್ಯರ ಮೇಲೆ ದಾಳಿ ಆಸ್ಪತ್ರೆಗಳು ಬಂದ್ ಮಾಡಿಸಿದ ಅಧಿಕಾರಿಗಳು   

ಜೇವರ್ಗಿ: ತಾಲ್ಲೂಕಿನಲ್ಲಿ ನಕಲಿ ವೈದ್ಯರ ವೈದ್ಯರ ಮೇಲೆ ದಾಳಿ ನಡೆಸಿದ್ದು, 8 ಮಂದಿಯನ್ನು ಬಂಧಿಸಲಾಗಿದ್ದು, ಒಬ್ಬ ನಕಲಿ ವೈದ್ಯ ಪರಾರಿಯಾಗಿದ್ದಾನೆ.

ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ಗ್ರಾಮೀಣ ಪ್ರದೇಶದ ತಾಲ್ಲೂಕಿನ ಗ್ರಾಮಗಳಾದ ಸೊನ್ನದಲ್ಲಿ ಮೂವರು, ನೆಲೋಗಿಯಲ್ಲಿ ಇಬ್ಬರು, ನೇದಲಗಿಯಲ್ಲಿ ಇಬ್ಬರು, ಜೇರಟಗಿಯಲ್ಲಿ ಇಬ್ಬರು ಸೇರಿದಂತೆ 9 ನಕಲಿ ವೈದ್ಯರ ಆಸ್ಪತ್ರೆಗಳನ್ನು ಮುಚ್ಚಿಸಿ ಬಂಧಿಸಲಾಗಿದೆ.

ಒಬ್ಬ ನಕಲಿ ವೈದ್ಯನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮುಂಬರುವ ದಿನಗಳಲ್ಲಿ ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕಿನಲ್ಲಿರುವ ನಕಲಿ ವೈದ್ಯರನ್ನು ಗುರುತಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಸಿದ್ದು ಪಾಟೀಲ ತಿಳಿಸಿದ್ದಾರೆ.

ADVERTISEMENT

ತಹಶೀಲ್ದಾರ್ ಮಲ್ಲಣ್ಣ ಯಲಗೋಡ, ಜೇವರ್ಗಿ ಸಿಪಿಐ ರಾಜೇಸಾಹೇಬ್ ನದಾಫ್, ನೆಲೋಗಿ ಪಿಎಸ್ಐ. ಅಶೋಕ ಪಾಟೀಲ ಸೇರಿದಂತೆ ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ನಕಲಿ ವೈದ್ಯರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

೦೮ಜೆವಿಜಿ೦೧: ಜೇವರ್ಗಿ: ತಾಲ್ಲೂಕಿನಲ್ಲಿ ನಕಲಿ ವೈದ್ಯರ ಮೇಲೆ ದಾಳಿ ಆಸ್ಪತ್ರೆಗಳು ಬಂದ್ ಮಾಡಿಸಿದ ಅಧಿಕಾರಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.