ADVERTISEMENT

ಕಲಬುರಗಿ: ಆರು ಜನರಿಗೆ ಅವ್ವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 5:21 IST
Last Updated 29 ಜನವರಿ 2026, 5:21 IST
ಚನ್ನವೀರ ಶಿವಾಚಾರ್ಯರು
ಚನ್ನವೀರ ಶಿವಾಚಾರ್ಯರು   

ಕಲಬುರಗಿ: ಜಿಲ್ಲೆಯ ಡೊಂಗರಗಾಂವದ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದ ವತಿಯಿಂದ ನೀಡುವ ಹತ್ತನೇ ವರ್ಷದ 2025ನೇ ಸಾಲಿನ ‘ಅವ್ವ’ ಪ್ರಶಸ್ತಿಗೆ ಹಾರಕೂಡದ ಚನ್ನವೀರ ಶಿವಾಚಾರ್ಯರು ಸೇರಿ ಆರು ಜನ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಶರಣಬಸಪ್ಪ ವಡ್ಡನಕೇರಿ, ಸಂಚಾಲಕ ನಾಗಪ್ಪ ಗೋಗಿ ತಿಳಿಸಿದ್ದಾರೆ.

ಚನ್ನವೀರ ಶಿವಾಚಾರ್ಯರ ‘ಚನ್ನಶ್ರೀವಾಣಿ’ (ಅಂಕಣ ಬರಹಗಳ ಸಂಕಲನ), ಗೊರೂರು ಪಂಕಜ ಅವರ ಬೆರಗು ರೇಖೆಗಳು(ಕವನ ಸಂಕಲನ) ಕೃತಿಗಳು, ಶರಣಬಸವೇಶ್ವರ ಮಹಾಸಂಸ್ಥಾನದ ದಾಕ್ಷಾಯಣಿ ಶರಣಬಸವಪ್ಪ ಅಪ್ಪ (ಶಿಕ್ಷಣ ಮತ್ತು ದಾಸೋಹ), ಭಾಷಾ ವಿಜ್ಞಾನಿ ಪ್ರೊ.ವಿ.ಜಿ. ಪೂಜಾರ(ಸಾಹಿತ್ಯ), ಕಲಬುರಗಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ ಪಸಾರ (ಕಾನೂನು), ಶರಣಮ್ಮ ಬಿ.ಪಾಟೀಲ (ಮಹಿಳಾ ಉದ್ಯಮಿ) ಅವರನ್ನು ಅವ್ವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರುವರಿ 16ರಂದು ಹಾರಕೂಡ ಶ್ರೀಮಠದಲ್ಲಿ ನಡೆಯಲಿದ್ದು, ಪ್ರಶಸ್ತಿಯು ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ಹಾಗೂ ಸನ್ಮಾನ ಒಳಗೊಂಡಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.