ADVERTISEMENT

ಕಲಬುರಗಿ: ಬಸವ ಜಯಂತ್ಯುತ್ಸವಕ್ಕೆ ಅದ್ಧೂರಿ ಚಾಲನೆ, ವಿವಿಧೆಡೆ ಅನ್ನಸಂತರ್ಪಣೆ

​ಪ್ರಜಾವಾಣಿ ವಾರ್ತೆ
Published 3 ಮೇ 2022, 5:21 IST
Last Updated 3 ಮೇ 2022, 5:21 IST
ಜಗತ್ ವೃತ್ತದಲ್ಲಿರುವ ಬಸವಣ್ಣನವರ ಅಶ್ವಾರೂಢ ಪ್ರತಿಮೆಗೆ ಸಂಸದ ಡಾ.ಉಮೇಶ ಜಾಧವ ಅವರು ಮಾಲಾರ್ಪಣೆ ಮಾಡಿದರು.
ಜಗತ್ ವೃತ್ತದಲ್ಲಿರುವ ಬಸವಣ್ಣನವರ ಅಶ್ವಾರೂಢ ಪ್ರತಿಮೆಗೆ ಸಂಸದ ಡಾ.ಉಮೇಶ ಜಾಧವ ಅವರು ಮಾಲಾರ್ಪಣೆ ಮಾಡಿದರು.   

ಕಲಬುರಗಿ: ವಿಶ್ವಗುರು ಬಸವಣ್ಣನವರ 889ನೇ ಜಯಂತ್ಯುತ್ಸವದ ಅಂಗವಾಗಿ ನಗರದಲ್ಲಿ ಅದ್ಧೂರಿ ಕಾರ್ಯಕ್ರಮಗಳು ಆರಂಭವಾಗಿವೆ.

ಜಗತ್ ವೃತ್ತದಲ್ಲಿರುವ ಬಸವಣ್ಣನವರ ಅಶ್ವಾರೂಢ ಪ್ರತಿಮೆಗೆ ಸಂಸದ ಡಾ.ಉಮೇಶ ಜಾಧವ ಅವರು ಮಾಲಾರ್ಪಣೆ ಮಾಡಿದರು.

ಸುಲಫಲ-ಶ್ರೀಶೈಲಂ ಪೀಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಅಕ್ಕ ಅನ್ನಪೂರ್ಣ ತಾಯಿ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್, ಬಸವ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ರವಿ ಬಿರಾದಾರ ಕಮಲಾಪುರ, ಮಾಜಿ ಶಾಸಕ ಬಿ.ಆರ್. ಪಾಟೀಲ, ಜಿಲ್ಲಾಧಿಕಾರಿ ಯಶವಂತ ಗುರುಕರ್, ಎಸ್ಪಿ ಇಶಾ ಪಂತ್, ಜಿ.ಪಂ. ಸಿಇಒ ಡಾ.ದಿಲೀಷ್ ಶಶಿ, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಅಖಿಲ‌ ಭಾರತ ವೀರಶೈವ ‌ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಮೋದಿ, ಜಿಲ್ಲಾ‌ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಕೊಡಲಹಂಗರಗಾ ಇತರರು ಇದ್ದರು‌.

ADVERTISEMENT

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಜಾಧವ, ವಿಶ್ವದಲ್ಲಿ ಮೊದಲ ಸಂಸತ್ತು ಆರಂಭಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಅವರ ನೆಲವನ್ನು ಸಂಸತ್ತಿನಲ್ಲಿ ಪ್ರತಿನಿಧಿಸಿರುವುದು ಹೆಮ್ಮೆ. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಬಸವಣ್ಣನವರ ಚಿಂತನೆಗಳ ಬಗ್ಗೆ ವಿಶೇಷ ಆಸಕ್ತಿ ಇದೆ ಎಂದರು.

ಮಾಜಿ ಶಾಸಕ ಬಿ.ಆರ್. ಪಾಟೀಲ ಮಾತನಾಡಿ, ಬಸವಣ್ಣನವರ ‌ತತ್ವಗಳು ಸಮಾನತೆಯ ಸಂದೇಶವನ್ನು ಹೊಂದಿದೆ. ಸಮಾಜದಲ್ಲಿ ಇವುಗಳನ್ನು ಅಳವಡಿಸಿಕೊಳ್ಳಬೇಕಿದೆ. ರಾಮಮನೋಹರ ಲೋಹಿಯಾ ಅವರೂ ಬಸವಣ್ಣನವರ ತತ್ವಗಳನ್ನೇ ಹೇಳಿದ್ದಾರೆ.

ಅಕ್ಕ ಅನ್ನಪೂರ್ಣ ತಾಯಿ, ಸುಲಫಲ ಮಠದ ಶ್ರೀಗಳು, ಜಿಲ್ಲಾಧಿಕಾರಿ ಯಶವಂತ ಗುರುಕರ ಮಾತನಾಡಿದರು.

ಜಯಂತಿ ಅಂಗವಾಗಿ ಜಗತ್ ವೃತ್ತ ಸೇರಿದಂತೆ ವಿವಿಧೆಡೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.