ಕಾಳಗಿ: ಪಟ್ಟಣದಲ್ಲಿ ಮೇ 11ರಂದು ಒಂದೇ ವೇದಿಕೆಯಡಿ ಹಮ್ಮಿಕೊಂಡಿರುವ ರೇಣುಕಾಚಾರ್ಯ ಮತ್ತು ಬಸವೇಶ್ವರರ ತಾಲ್ಲೂಕು ಮಟ್ಟದ ಜಯಂತ್ಯುತ್ಸವ ನಿಮಿತ್ತ ಶನಿವಾರ ಕಾರು ಮತ್ತು ಬೈಕ್‌ಗಳ 30ಕಿ.ಮೀ ಜಾಥಾ ಅದ್ಧೂರಿಯಾಗಿ ಜರುಗಿತು.
ತಾಲ್ಲೂಕಿನ ಶ್ರೀಕ್ಷೇತ್ರ ರೇವಗ್ಗಿ (ರಟಕಲ್) ರೇವಣಸಿದ್ದೇಶ್ವರ ಗುಡ್ಡದಲ್ಲಿ ರಟಕಲ್ ಹಿರೇಮಠದ ಪೂಜ್ಯ ರೇವಣಸಿದ್ಧ ಶಿವಾಚಾರ್ಯರು, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಜಿ.ಪಂ. ಮಾಜಿ ಸದಸ್ಯ ರಾಜೇಶ ಗುತ್ತೇದಾರ ಕಾಯಿಕರ್ಪೂರ ಸಲ್ಲಿಸಿ, ದೀಪ ಬೆಳಗಿ, ರಿಬ್ಬನ್ ಕತ್ತರಿಸಿ ಜಾಥಾಕ್ಕೆ ಶುಭ ಹಾರೈಸಿ ಚಾಲನೆ ನೀಡಿದರು.
ಜಾಥಾವು ಗುಡ್ಡದಿಂದ ಕಂದಗೂಳ ಕ್ರಾಸ್, ರಟಕಲ್, ಕೋಡ್ಲಿ ಕ್ರಾಸ್ ಮಾರ್ಗವಾಗಿ ಕಾಳಗಿ ನೀಲಕಂಠ ಕಾಳೇಶ್ವರ ದೇವಸ್ಥಾನಕ್ಕೆ ತಲುಪಿ ಕಾಳೇಶ್ವರ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಗೋಟೂರ, ಕಣಸೂರ ಮಾರ್ಗವಾಗಿ ಕೋರವಾರ ಅಣಿವೀರಭದ್ರೇಶ್ವರ ದೇವಾಲಯಕ್ಕೆ ತೆರಳಿ ಅಣಿವೀರಭದ್ರೇಶ್ವರ ಮೂರ್ತಿಗೆ ಮಹಾಮಂಗಳಾರತಿ ಮಾಡಿ ಜಾಥಾ ಮುಕ್ತಾಯ ಮಾಡಲಾಯಿತು.
ಈ ವೇಳೆ ನೂರಾರು ಕಾರು, ಬೈಕ್‌ಗಳು ಕೇಸರಿ ಧ್ವಜ ಹೊಂದಿ ಸಾಲುಗಟ್ಟಿ ಆಕರ್ಷಿಸಿದವು. ಅಭಿಮಾನಿಗಳ ಜಯಘೋಷ ಮೊಳಗಿತು. ಜಯಂತ್ಯುತ್ಸವ ಸಮಿತಿ ಗೌರವಾಧ್ಯಕ್ಷ ಶೇಖರ ಪಾಟೀಲ, ಅಧ್ಯಕ್ಷ ಮಲ್ಲಿನಾಥ ಕೋಲಕುಂದಿ, ಪ್ರಚಾರ ಸಮಿತಿ ಅಧ್ಯಕ್ಷ ಮಲ್ಲಿನಾಥ ಪಾಟೀಲ, ಜಗದೀಶ ಪಾಟೀಲ, ಸಂತೋಷ ಪಾಟೀಲ, ಶಿವರಾಜ ಪಾಟೀಲ, ಸೋಮಶೇಖರ ಚಿಂಚೋಳಿ, ವಿಜಯಕುಮಾರ ಚೇಂಗಟಾ, ಸಿದ್ದಯ್ಯ ಮಠಪತಿ, ಆನಂದ ಕೇಶ್ವಾರ, ಬಸವರಾಜ ತುಪ್ಪದ, ಯಲ್ಲಾಲಿಂಗ ಉನ್ನಿ, ನಾಗರಾಜ ಚಿಕ್ಕಮಠ, ವೀರಯ್ಯ ಮಠಪತಿ ಸೇರಿದಂತೆ ಸುತ್ತಲಿನ ಜನರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.