ADVERTISEMENT

ವಸತಿ ನಿಲಯಕ್ಕೆ ಭೇಟಿ ನೀಡಿದ ಬಿಸಿಎಂ ಆಯುಕ್ತ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 4:14 IST
Last Updated 11 ಆಗಸ್ಟ್ 2021, 4:14 IST
ಬಿಸಿಎಂ ಇಲಾಖೆ ಆಯುಕ್ತ ವಸಂತಕುಮಾರ ಕಲಬುರ್ಗಿಯ ಅಂಬಿಕಾ ನಗರದಲ್ಲಿರುವ ಮೆಟ್ರಿಕ್ ನಂತರದ ಮಹಿಳಾ ವಸತಿ ನಿಲಯಕ್ಕೆ ಭೇಟಿ ನೀಡಿ ವಸತಿ ನಿಲಯದ ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಿದರು
ಬಿಸಿಎಂ ಇಲಾಖೆ ಆಯುಕ್ತ ವಸಂತಕುಮಾರ ಕಲಬುರ್ಗಿಯ ಅಂಬಿಕಾ ನಗರದಲ್ಲಿರುವ ಮೆಟ್ರಿಕ್ ನಂತರದ ಮಹಿಳಾ ವಸತಿ ನಿಲಯಕ್ಕೆ ಭೇಟಿ ನೀಡಿ ವಸತಿ ನಿಲಯದ ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಿದರು   

ಕಲಬುರ್ಗಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (ಬಿಸಿಎಂ) ಆಯುಕ್ತ ವಸಂತಕುಮಾರ ಅವರು ಮಂಗಳವಾರ ಇಲ್ಲಿನ ಅಂಬಿಕಾ ನಗರದಲ್ಲಿರುವ ಮೆಟ್ರಿಕ್ ನಂತರದ ಮಹಿಳಾ ವಸತಿ ನಿಲಯಕ್ಕೆ ಭೇಟಿ ನೀಡಿ ವಸತಿ ನಿಲಯದ ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಿದರು.

ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಜಗದೀಶ್ ಹಾಗೂ ಜಿ. ಜಗದೀಶ್ ಅವರೊಂದಿಗೆ ಸಂಜೆ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ಹಾಸ್ಟೆಲ್‌ನಲ್ಲಿ ನೀಡಲಾಗುತ್ತಿರುವ ಊಟ, ಹಾಸಿಗೆ ಮತ್ತು ಶೌಚಾಲಯ ವ್ಯವಸ್ಥೆ, ಸ್ವಚ್ಛ ಕುಡಿಯುವ ನೀರು ಹಾಗೂ ಕಲ್ಪಿಸಲಾಗುತ್ತಿರುವ ಇನ್ನಿತರ ಮೂಲಸೌಕರ್ಯಗಳ ಕುರಿತು ವಿದ್ಯರ್ಥಿಗಳಿಂದಲೆ ಮಾಹಿತಿ ಪಡೆದುಕೊಂಡರು.

ವಸತಿ ನಿಲಯದಲ್ಲಿ ಉಟೋಪಚಾರ ಚೆನ್ನಾಗಿದೆ. ಸ್ವಚ್ಛ ಕುಡಿಯುವ ನೀರು ಪೂರೈಸಲಾಗುತ್ತಿದೆ. ಶೌಚಾಲಯದ ಸಮಸ್ಯೆ ಇಲ್ಲ. ಓದುವಿಕೆಗೆ ಉತ್ತಮ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆಯಿದ್ದು, ವಸತಿ ನಿಲಯವು ಉತ್ತಮ ನಿರ್ವಹಣೆಯಿಂದ ಕೂಡಿದೆ. ಹೀಗಾಗಿ ಯಾವುದೇ ಕುಂದುಕೊರತೆಗಳು ಇಲ್ಲ ಎಂದು ವಿದ್ಯಾರ್ಥಿನಿಯರು ತಿಳಿಸಿದರು. ಇದೇ ರೀತಿ ವಸತಿ ನಿಲಯ ನಿರ್ವಹಣೆ ಮುಂದುವರೆಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ADVERTISEMENT

ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ವಸತಿ ನಿಲಯದಲ್ಲಿ ಎಲ್ಲರೂ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳಾದ ಅಂತರ ಪಾಲನೆ, ಮಾಸ್ಕ್ ಧರಿಸುವುದು ಮತ್ತು ಆಗಾಗ ಕೈಗಳನ್ನು ಸ್ವಚ್ಚವಾಗಿ ತೊಳೆದುಕೊಳ್ಳಬೇಕು ಎಂದರು.

ವಸತಿ ನಿಲಯದಲ್ಲಿರುವ ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಂಡು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿ, ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ಉನ್ನತ ಸ್ಥಾನ ಅಲಂಕರಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಬಿಸಿಎಂ ಅಧಿಕಾರಿ ರಮೇಶ ಸಂಗಾ, ತಾಲ್ಲೂಕು ಅಧಿಕಾರಿ ಅಂಬವ್ವಾ, ವ್ಯವಸ್ಥಾಪಕ ಮಹಿಂದ್ರ, ಆರಿಫುದ್ದೀನ್, ವಾರ್ಡನ್ ಮಹಾದೇವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.