ಶಹಾಬಾದ್: ‘ಪ್ರಾಚೀನ ಸಮಸ್ತ ಕನ್ನಡಿಗರ ಸಾಧನೆಗಳನ್ನು ಪ್ರತಿಪಾದಿಸುವ ಭಂಕೂರ ಗ್ರಾಮದ ಐತಿಹಾಸಿಕ ಸ್ಮಾರಕಗಳು, ವೀರಗಲ್ಲುಗಳು, ಶಿಲ್ಪ ಕಲೆಗಳು, ಶಾಸನಗಳು ಸಾವಿರಾರು ವರ್ಷದ ರೋಚಕ ಇತಿಹಾಸವನ್ನು ಸಾರುತ್ತವೆ’ ಎಂದು ಸಂಶೋಧಕ, ಸಾಹಿತಿ ಮುಡುಬಿ ಗುಂಡೇರಾವ ಹೇಳಿದರು.
ತಾಲ್ಲೂಕಿನ ಭಂಕೂರ ಗ್ರಾಮದ ಜೈನ ಶಾಂತಿನಾಥ ತೀರ್ಥಂಕರ ಮಂದಿರಕ್ಕೆ ಅವರು ಇತ್ತಿಚೆಗೆ ಭೇಟಿ ನೀಡಿ ಮಾತನಾಡಿದರು.
ಭಂಕೂರಿನಲ್ಲಿ ದೊರೆಯುವ ಜೈನ ಬಸದಿ, ಉದ್ಭವ ಗಣೇಶ, ವೀರಗಲ್ಲು, ಮಹಾಸತಿ ಗಲ್ಲುಗಳು, ರಾಮಲಿಂಗೇಶ್ವರ ದೇವಸ್ಥಾನ ಪ್ರಾಚೀನ ಕಾಲದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆಧ್ಯಾತ್ಮಿಕ ಇತಿಹಾಸವನ್ನು ಸಾರುತ್ತವೆ. ರಾಷ್ಟ್ರಕೂಟರ, ಕಲ್ಯಾಣ ಚಾಲುಕ್ಯರು ಈ ಗ್ರಾಮವನ್ನು ಆಳಿದ್ದಾರೆ ಎನ್ನುವುದಕ್ಕೆ ಇಲ್ಲಿಯ ಸ್ಮಾರಕಗಳೇ ಸಾಕ್ಷಿಯಾಗಿವೆ ಎಂದರು .
ಬಸವ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿದರು. ಶಿವಯೋಗೆಪ್ಪಾ ಎಸ್.ಬಿರಾದಾರ, ಭಂಕೂರಿನ ಕರ್ನಾಟಕ ಪಿಯು ಕಾಲೇಜಿನ ಇತಿಹಾಸ ಉಪನ್ಯಾಸಕ ಶಶಿಕಾಂತ ಮಡಿವಾಳ, ಪ್ರಮುಖರಾದ ಚನ್ನಪ್ಪಗೌಡ್ ಘಟ್ಟದ್, ಶೀತಲನಾಥ ಜೈನ್, ಶಾಂತಿಪ್ರಸಾದ, ಮಹಾವೀರ ಬಸ್ಮೆ, ಪಲ್ಲವಿ, ಸನ್ಮತಿ, ಪ್ರಮೋದ ಸೇರಿ ಇನ್ನಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.