ಚಿಂಚೋಳಿ: ‘ಜಾಗತಿಕ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಿಸಿ ಸದೃಢ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶ ಕಳೆದುಕೊಂಡರೆ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಭಾರಿ ಹಿನ್ನಡೆಯಾಗಲಿದೆ’ ಎಂದು ಬಿಜೆಪಿ ನಾಯಕಿ ಸಂತೋಷಿರಾಣಿ ರಾಜಕುಮಾರ ಪಾಟೀಲ ತೇಲ್ಕೂರು ಹೇಳಿದರು.
ತಾಲ್ಲೂಕಿನ ನಿಡಗುಂದಾ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಪರ ಮತಯಾಚಿಸಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಜಗತ್ತು ಕೊಂಡಾಡುತ್ತಿದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ದೇಶಕ್ಕಿಂತ ಅಧಿಕಾರದ ಹಪಾಹಪಿತನವೇ ಹೆಚ್ಚಾಗಿದೆ. ಹೀಗಾಗಿ ಮೋದಿ ಅವರನ್ನೂ ಟೀಕಿಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
‘ನೀವು ಹಾಕಿದ ಒಂದು ಮತ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ಅವರನ್ನು ಮಂತ್ರಿ ಮಾಡಿದರೆ, ಅದೇ ಮತ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲಿದೆ. ಹೀಗಾಗಿ ಎಲ್ಲರೂ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಶಿವಶರಣಪ್ಪ ಶಂಕರ ಮಾತನಾಡಿದರು. ಓಂ ಪ್ರಕಾಶ ಪಾಟೀಲ, ವೀರೇಶ ಹೂಗಾರ, ಶಿವಾನಂದ ಸ್ವಾಮಿ, ಬಸವರಾಜ ರಾಯಕೋಡ, ಶ್ರೀಮಂತ ಅವುಂಟಿ, ಶಂಕರ ಜಡಾಲ್, ದೊಡ್ಡಯ್ಯ ಸ್ವಾಮಿ, ಬಸವರಾಜ ಕಪಾಳ, ಮಹಿಳಾ ಮುಖಂಡರಾದ ಮಹಾನಂದಾ ಪಾಟೀಲ, ಜಯಶ್ರೀ ಬೋಳದ್, ಶಿಲ್ಪಾ ಪಾಟೀಲ, ವಿಜಯಲಕ್ಷ್ಮಿ, ವಿಶ್ವಕರ್ಮ ಮೊದಲಾದವರು ಹಾಜರಿದ್ದರು.
ದೇಶ ಸುರಕ್ಷಿತವಾಗಿರಬೇಕು ಜನ ನೆಮ್ಮದಿಯಿಂದ ಇರಬೇಕಾದರೆ ಜಾತಿ ಮತ ಧರ್ಮ ಯಾವುದನ್ನೂ ನೋಡದೇ ಭಾರತೀಯನಾಗಿ ಬಿಜೆಪಿಗೆ ಮತ ನೀಡಬೇಕುಶಿವಶರಣಪ್ಪ ಶಂಕರ ಮಂಡಲ ಅಧ್ಯಕ್ಷ ಬಿಜೆಪಿ ಸೇಡಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.