ಕಲಬುರಗಿ: ಜಿಲ್ಲೆಯ ಆಳಂದದಲ್ಲಿ ಭಾನುವಾರ ಕಲಬುರಗಿ– ಯಾದಗಿರಿ ವಿಧಾನ ಪರಿಷತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ ಅವರ ಪರ ಪ್ರಚಾರ ಹಾಗೂ ಸಮಾಲೋಚನಾ ಸಭೆ ನಡೆಯಿತು.
ಶಾಸಕ ಸುಭಾಷ ಗುತ್ತೇದಾರ ಅವರು ದೀಪ ಬೆಳಗಿಸುವ ಮೂಲಕ ಸಭೆ ಉದ್ಘಾಟಿಸಿದರು. ಪಕ್ಷದ ಮಂಡಲ ಘಟಕದ ಅಧ್ಯಕ್ಷ ಆನಂದ ಪಾಟೀಲ, ಮುಖಂಡರಾದ ವಿದ್ಯಾಸಾಗರ ಕುಲಕರ್ಣಿ, ವೀರಣ್ಣ ಮಂಗಾಣಿ,ಗೌರಿ, ಆಳಂದ ಪುರಸಭೆಯ ಅಧ್ಯಕ್ಷೆ ರಾಜಶ್ರೀ, ಉಪಾಧ್ಯಕ್ಷ ವೀರಣ್ಣ ಹತ್ತರಕಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಣಮಂತ ಮಾಲಾಜಿ, ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕ ಮಲ್ಲಿಕಾರ್ಜುನ ತಡಕಲ್ಲ, ಸಂಜಯ ಮಿಸ್ಕಿನ್ ಮೈಬೂಬ್, ಶರಣು ಕುಮಸಿ, ಮಲ್ಲಣ್ಣ ನಾಗೂರ, ಸಂತೋಷ ಹಾದಿಮನಿ, ಚಂದ್ರಶಾ ಹನಗುಂಟಿ, ಮಾನು ಪವಾರ, ಮಲ್ಲಿಕಾರ್ಜುನ ಕಂದಗೂಳ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.