ADVERTISEMENT

ಹತ್ತಿಕುಣಿ: ವಿದ್ಯುತ್ ತಗುಲಿ ಶಾಖಾಧಿಕಾರಿ ಸಾವು

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 16:18 IST
Last Updated 7 ಜೂನ್ 2025, 16:18 IST
ಪ್ರಶಾಂತ್ ದೇವಾಪುರ
ಪ್ರಶಾಂತ್ ದೇವಾಪುರ   

ಹತ್ತಿಕುಣಿ (ಯರಗೋಳ): ಜೆಸ್ಕಾಂ ಯಾದಗಿರಿ ವಿಭಾಗ ಹತ್ತಿಕುಣಿ ಶಾಖೆಯ ಪ್ರಭಾರ ಶಾಖಾಧಿಕಾರಿ ಪ್ರಶಾಂತ್ ದೇವಾಪುರ(30) ಶನಿವಾರ ಮಧ್ಯಾಹ್ನ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ.

ಯಡ್ಡಳ್ಳಿ-ಬಂದಳ್ಳಿ ಗ್ರಾಮಗಳ ಸೀಮೆಯಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ವೇಳೆ ಹರಿಯುತ್ತಿದ್ದ ವಿದ್ಯುತ್ ಶಾಖಕ್ಕೆ ಸ್ಪರ್ಶಿಸಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಜೆಸ್ಕಾಂ ಅಧಿಕಾರಿ ಸಾವಿನ ಸುತ್ತ ಈದಿಗ ಕೆಲವು ಸಂಶಯಗಳು ಮೂಡಿವೆ. ಅಧಿಕಾರಿ ಲೈನ್ ಬಂದ್ ಮಾಡಿರಲಿಲ್ಲವೇ? ಲೈನ್ ಮ್ಯಾನ್‌ಗಳು ಮಾಡಬೇಕಾದ ಕೆಲಸ ಇವರೇಕೆ ಮಾಡಿದರು? ತಂತಿ ಇವರು ಹಿಡಿದದ್ದು ಹತ್ತಿಕುಣಿಯಲ್ಲಿಯೇ? ಇಲ್ಲವೇ ಪಕ್ಕದ ಚಾಮನಳ್ಳಿಯೇ ಹೀಗೆ ಅನೇಕ ಪ್ರಶ್ನೆಗಳು ಎದ್ದಿವೆ.

ADVERTISEMENT

ಈ ಪ್ರಕರಣ ಯಾದಗಿರಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.