ಕಲಬುರಗಿ: ಭಾರತೀಯ ಬೌದ್ಧ ಮಹಾಸಭಾದ ಕಲಬುರಗಿ ಜಿಲ್ಲಾ ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ ಭಾನುವಾರ ನಡೆಯಿತು.
ಅಧ್ಯಕ್ಷೆಯಾಗಿ ಡಾ. ಪುಟ್ಟಮಣಿ ದೇವಿದಾಸ್, ಕಾರ್ಯದರ್ಶಿಯಾಗಿ ಡಾ. ರಾಜಾಬಾಯಿ ಪಾಂಡುರಂಗರಾವ್, ಉಪಾಧ್ಯಕ್ಷರಾಗಿ ಭಾರತಿ ಸಾಯಿಬಣ್ಣ, ಚಂದ್ರ ಭಾಗಾ ಕುಮ್ಸಿ, ಸುನೀತಾ ಕಾಂಬಳೆ, ರಂಜನಾ ಮಿಲಿಂದ್, ಕೋಶಾಧ್ಯಕ್ಷರಾಗಿ ಸುನಂದಾ ಮುಡ್ಡಿ ಅವರು ಆಯ್ಕೆಯಾದರು.
ಬೌದ್ಧ ಮಹಾಸಭಾದ ರಾಜ್ಯ ಘಟಕದ(ಉತ್ತರ ಕರ್ನಾಟಕ) ಅಧ್ಯಕ್ಷ ಮನೋಹರ ಮೋರೆ ಸಭೆ ಉದ್ಘಾಟಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ನಾಗಪ್ಪ ಹೋಲ್ಕರ್ ಅವರು ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಕೇಂದ್ರ ಮಹಿಳಾ ಸಮಿತಿ ಸದಸ್ಯೆ ವೈಶಾಲಿ ಮೋರೆ, ಉತ್ತರ ಕರ್ನಾಟಕ ಭಾಗದ ಕಾರ್ಯದರ್ಶಿ ದೇವೇಂದ್ರ ಭಾಲ್ಕೆ, ಪ್ರಾಧ್ಯಾಪಕಿ ಸೇವಂತಾ, ಗೌತಮಿ ಹಿರೋಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ವಿಜಯ ಲಕ್ಷ್ಮಿ, ಸುನಂದಾ ಶಿವಕೇರಿ, ಲಲಿತಾಬಾಯಿ, ಶ್ರೀದೇವಿ, ಮಾಯಾದೇವಿ ನಾಗೇಂದ್ರ, ನೀಲಮ್ಮ , ಶ್ರೀಮತಿ, ಕಲಾವತಿ, ರಮಾ, ಅಕ್ಷತಾ, ಲಕ್ಷ್ಮಿ ಕಟ್ಟಿಮನಿ, ಅಶ್ವಿನಿ , ಕವಿತಾ, ಮಾಯಾದೇವಿ, ಡಾ.ಸುಕನ್ಯಾ , ಜಯಶ್ರೀ, ಜಗದೇವಿ, ರಂಜಿತಾ, ಶ್ರುತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.