ADVERTISEMENT

ಅಫಜಲಪುರ | ಶ್ರಮಿಕ ವರ್ಗಕ್ಕೆ ಬಜೆಟ್‌ನಲ್ಲಿ ಅನ್ಯಾಯ: ಶ್ರೀಮಂತ ಬಿರಾದಾರ್

​ಪ್ರಜಾವಾಣಿ ವಾರ್ತೆ
Published 9 ಜುಲೈ 2023, 13:38 IST
Last Updated 9 ಜುಲೈ 2023, 13:38 IST
ಶ್ರೀಮಂತ ಬಿರಾದಾರ್
ಶ್ರೀಮಂತ ಬಿರಾದಾರ್   

ಅಫಜಲಪುರ: ‘ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್‌ನಿಂದ ಕಾರ್ಮಿಕ ವರ್ಗಕ್ಕೆ ಯಾವುದೇ ಅನುಕೂಲವಾಗುವುದಿಲ್ಲ’ ಎಂದು ಸೆಂಟರ್ ಆಫ್ ಇಂಡಿಯನ್ ‌ಟ್ರೇಡ್ ಯೂನಿಯನ್ಸ್ (ಸಿಐಟಿಯು) ತಾಲ್ಲೂಕು ಸಂಚಾಲಕ ಶ್ರೀಮಂತ ಬಿರಾದಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಲಸದ ಅವಧಿ ಹೆಚ್ಚಳ ರದ್ದು, ಮಹಿಳೆಯರಿಗೆ ರಾತ್ರಿ ಪಾಳೆ ಮಹಿಳೆಯರಿಗೆ ರದ್ದು, ಕನಿಷ್ಠ ವೇತನ ಪರಿಷ್ಕರಣೆ ವಿಷಯದಲ್ಲೂ ಸರ್ಕಾರ ಯಾವುದೇ ಬದ್ದತೆ ತೋರಿಲ್ಲ. ಅಸಂಘಟಿತ ಕಾರ್ಮಿಕರ ಕಲ್ಯಾಣ ನಿರ್ಲಕ್ಷ್ಯ ಮಾಡಿದೆ ಎಂದು ಹೇಳಿಕೆ ನೀಡಿದ್ದಾರೆ.

ಭವಿಷ್ಯನಿಧಿ ಯೋಜನೆ ಸೇರಿ ಇತರೆ ಕಾರ್ಯಕ್ರಮಗಳನ್ನು ಘೋಷಿಸಬೇಕು ಕಾರ್ಮಿಕ ಸಂಘಗಳು ಕೋರಿದ್ದವು. ಕಾಂಗ್ರೆಸ್‌ ಚುನಾವಣೆಗೂ ಮುನ್ನ ಅಂಗನವಾಡಿ, ಬಿಸಿಯೂಟ ನೌಕರರಿಗೆ ಕೊಟ್ಟ ವೇತನ ಭರವಸೆಯನ್ನು ಈಡೇರಿಸಿಲ್ಲ.

ADVERTISEMENT

ಹೊರಗುತ್ತಿಗೆ ನಿಯಂತ್ರಿಸಿ ಕಾರ್ಮಿಕರಿಗೆ ನೇರಪಾವತಿ ವ್ಯವಸ್ಥೆ ಜಾರಿಗೊಳಿಸಬೇಕು ಎಂಬು ಬೇಡಿಕೆಯೂ ಈಡೇರಿಲ್ಲ. 

ಸ್ವಿಗ್ಗಿ, ಜೊಮಾಟೋ ಮೊದಲಾದ ಕಾರ್ಮಿಕರಿಗೆ ₹2 ಲಕ್ಷ ಜೀವವಿಮಾ ಸೌಲಭ್ಯ ಹಾಗೂ ₹2 ಲಕ್ಷ ಅಪಘಾತ ವಿಮಾ ಸೌಲಭ್ಯ ಕಲ್ಪಿಸಿ ಇದರ ಸಂಪೂರ್ಣ ವಿಮಾ ಕಂತನ್ನು ಸರ್ಕಾರದ ವತಿಯಿಂದ ಭರಿಸಲಾಗುವುದು ಎಂದು ಪ್ರಕಟಿಸಿರುವುದು, ಎಪಿಎಂಸಿ ಹಮಾಲಿ ಕಾರ್ಮಿಕರಿಗೆ ಶವಸಂಸ್ಕಾರ ಧನ ಸಹಾಯ ಹೆಚ್ಚಳ ಹಾಗೂ ಹಳದಿ ಬೋರ್ಡ್ ಹೊಂದಿರುವ ವಾಣಿಜ್ಯ ಚಾಲಕರಿಗೆ ಕೆಲವು ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಕಟಿಸಿರುವುದು ಸ್ವಾಗತಾರ್ಹವಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.