ADVERTISEMENT

ಕಲಬುರಗಿ: ಚೌಡಯ್ಯ ಪ್ರತಿಮೆ ಭಗ್ನ ಖಂಡಿಸಿ ಬೀದಿಗಿಳಿದ ಕೋಲಿ ಸಮುದಾಯ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 8:07 IST
Last Updated 13 ಅಕ್ಟೋಬರ್ 2025, 8:07 IST
<div class="paragraphs"><p>ಕಲಬುರಗಿಯಲ್ಲಿ ಕೋಲಿ ಸಮುದಾಯದ‌ ಜನರು ಸೋಮವಾರ ಪ್ರತಿಭಟನೆ‌ ನಡೆಸಿದರು</p></div>

ಕಲಬುರಗಿಯಲ್ಲಿ ಕೋಲಿ ಸಮುದಾಯದ‌ ಜನರು ಸೋಮವಾರ ಪ್ರತಿಭಟನೆ‌ ನಡೆಸಿದರು

   

ಕಲಬುರಗಿ: ಜಿಲ್ಲೆಯ ಶಹಾಬಾದ್ ತಾಲ್ಲೂಕಿನ ಮುತಗಾ ಗ್ರಾಮದಲ್ಲಿ ‌ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದನ್ನು ಖಂಡಿಸಿ ‌ನಗರದಲ್ಲಿ‌ ಸೋಮವಾರ ಕೋಲಿ ಕಬ್ಬಲಿಗ ಸಮುದಾಯದ ನೂರಾರು ಯುಜಜನರು ಪ್ರತಿಭಟನೆ ನಡೆಸಿದರು.

ನಗರದ ಗಂಗಾನಗರದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಸೂಪರ್‌ ಮಾರ್ಕೆಟ್ ಮೂಲಕ ‌ಜಗತ್‌ವೃತ್ತ ತಲುಪಿತು. ಜಗತ್‌ವೃತ್ತದಲ್ಲಿ ಟೈರುಗಳನ್ನು ‌ಸುಟ್ಟು ಆಕ್ರೋಶ ‌ವ್ಯಕ್ತಪಡಿಸಿದರು. ಬಳಿಕ‌ ಅನ್ನಪೂರ್ಣ ಕ್ರಾಸ್, ಲಾಹೋಟಿ‌ ಪೆಟ್ರೋಲ್ ಬಂಕ್ ಎದುರಿನಿಂದ ಜಿಲ್ಲಾಧಿಕಾರಿ ‌ಕಚೇರಿ ತನಕ ಪ್ರತಿಭಟನೆ ನಡೆಯಿತು.

ADVERTISEMENT

ನಿಜ ಶರಣ ಚೌಡಯ್ಯ ಪ್ರತಿಮೆ‌ ವಿರೂಪಗೊಳಿಸಿದ ದುಷ್ಕರ್ಮಿಗಳ‌ನ್ನು ಕೂಡಲೇ ಬಂಧಿಸಬೇಕು. ಅವರಿಗೆ ಕಠಿಣ ಶಿಕ್ಷೆ‌ ವಿಧಿಸಬೇಕು. ಹೊಸ‌ ಮೂರ್ತಿ ನಿರ್ಮಾಣಕ್ಕೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.