ADVERTISEMENT

ಚಿಂಚೋಳಿ | ಕಲ್ಲು ತೂರಾಟ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ– ಕ್ಷತ್ರೀಯ ಪರಿಷತ್

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 7:38 IST
Last Updated 25 ಫೆಬ್ರುವರಿ 2026, 7:38 IST
ಚಿಂಚೋಳಿಯ ತಾಲ್ಲೂಕು ಆಡಳಿತ ಸೌಧದ ಎದುರು ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ಅವರಿಗೆ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಮುಖಂಡರು ಮನವಿ ಸಲ್ಲಿಸಿದರು
ಚಿಂಚೋಳಿಯ ತಾಲ್ಲೂಕು ಆಡಳಿತ ಸೌಧದ ಎದುರು ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ಅವರಿಗೆ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಮುಖಂಡರು ಮನವಿ ಸಲ್ಲಿಸಿದರು   

ಚಿಂಚೋಳಿ: ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ರಾವೂರ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತ್ಯುತ್ಸವದ ಪ್ರಯುಕ್ತ ನಡೆದ ಶೋಭಾಯಾತ್ರೆ ಸಮಯದಲ್ಲಿ ಕಲ್ಲು ತೂರಾಟ ನಡೆಸಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಕರ್ನಾಟಕ ಕ್ಷತ್ರೀಯ ಪರಿಷತ್ ತಾಲ್ಲೂಕು ಘಟಕದಿಂದ ಆಗ್ರಹಿಸಲಾಯಿತು.

ಮಂಗಳವಾರ ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಮರಾಠಾ ಸಮಾಜದ ಮುಖಂಡರು, ಮಹಾರಾಜರಿಗೆ ಅಗೌರವ ತೋರಿದ್ದಲ್ಲದೇ, ಹಿಂದೂ ಧರ್ಮವನ್ನು ಅವಮಾನಿಸಲಾಗಿದೆ. ಇದಕ್ಕೆ ಕಾರಣರಾದವರನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು. ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.

ಸಮಾಜದ ಅಧ್ಯಕ್ಷ ಸುಧಾಕರ ಪಾಟೀಲ, ಶಹಾಜಿರಾವ್ ಸೂರ್ಯವಂಶಿ, ನಾಗರಾಜ ಸೇವತಕರ್, ಗಿರಿರಾಜ ನಾಟಿಕಾರ, ರವಿ ಪಾಟೀಲ, ಅಮರ ಲೊಡ್ಡನೋರ್, ಸುಧಾಕರ, ಅಶೋಕ ಮಂತನಗೊಟ್ಟಿ ಮೊದಲಾದವರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.