ADVERTISEMENT

ಕಲಬುರಗಿ| ಅಥ್ಲೆಟಿಕ್ಸ್ ಕ್ರೀಡಾಕೂಟ: ಚಿರಂತ್‌ ಹಿಂದಿಕ್ಕಿದ ಚಿರಾಗ್‌ಗೆ ಅಗ್ರಸ್ಥಾನ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 5:51 IST
Last Updated 14 ನವೆಂಬರ್ 2025, 5:51 IST
ಕಲಬುರಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಗುರುವಾರ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಬಾಲಕರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪೋಲ್‌ವಾಲ್ಟ್‌ನಲ್ಲಿ ಸ್ಪರ್ಧಿಯೊಬ್ಬರ ಸಾಹಸ  ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಕಲಬುರಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಗುರುವಾರ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಬಾಲಕರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪೋಲ್‌ವಾಲ್ಟ್‌ನಲ್ಲಿ ಸ್ಪರ್ಧಿಯೊಬ್ಬರ ಸಾಹಸ  ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್   

ಕಲಬುರಗಿ: 100 ಮೀಟರ್ ಓಟದಲ್ಲಿ ಅನುಭವಿಸಿದ ಹಿನ್ನಡೆಗೆ ಮುಯ್ಯಿ ತೀರಿಸಿಕೊಂಡ ಉಡುಪಿಯ ಚಿರಾಗ್ ಪೂಜಾರಿ 200 ಮೀ. ಓಟದಲ್ಲಿ ಅಗ್ರಸ್ಥಾನ ಗಳಿಸಿದರು.

ಇಲ್ಲಿಯ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಿಯು ಕಾಲೇಜುಗಳ ಬಾಲಕರ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ ಎರಡನೇ ದಿನವಾದ ಗುರುವಾರ ಅವರು ಮೈಸೂರಿನ ಚಿರಂತ್ ವಿರುದ್ಧ ಮೇಲುಗೈ ಸಾಧಿಸಿದರು. ಚಿರಂತ್ 100 ಮೀ. ಓಟದಲ್ಲಿ ಮೊದಲ ಸ್ಥಾನ ಪಡೆದಿದ್ದರು.

200 ಮೀ. ಓಟದಲ್ಲಿ ಚಿರಾಗ್‌ 21.28 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಶಾಟ್‌ಪಟ್‌ನಲ್ಲಿ ಉಡುಪಿಯ ಅನುರಾಗ್‌ ಮೊದಲ ಸ್ಥಾನ ಪಡೆದರು. 5 ಕಿ.ಮೀ. ರೇಸ್‌ವಾಕ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರತಿನಿಧಿಸಿದ್ದ ವಿಲಾಸ್‌ ಗೌಡಗೆ ಅಗ್ರಸ್ಥಾನ ಒಲಿಯಿತು.

ADVERTISEMENT

ಕ್ರೀಡಾಕೂಟಕ್ಕೆ ಶುಕ್ರವಾರ ಕೊನೆಯ ದಿನವಾಗಿದೆ.

ಎರಡನೇ ದಿನದ ಫಲಿತಾಂಶಗಳು: 200 ಮೀ.: ಚಿರಾಗ್ ಪೂಜಾರಿ (ಉಡುಪಿ, ಕಾಲ: 21.28 ಸೆ.)–1, ಚಿರಂತ್ ಪಿ. (ಮೈಸೂರು)–2, ಆಯುಷ್ ಪ್ರಾಂಜಲ್ (ದಕ್ಷಿಣ ಕನ್ನಡ)–3. 400 ಮೀ. ಹರ್ಡಲ್ಸ್: ನಿತಿನ್ ಗೌಡ ಎಂ. (ಬೆಂಗಳೂರು ಗ್ರಾಮಾಂತರ, ಕಾಲ: 53.97ಸೆ.)–1, ಆಕಾಶ್ ಲಗಮಣ್ಣ ಹುಕ್ಕೇರಿ (ದಕ್ಷಿಣ ಕನ್ನಡ)–2, ಪ್ರಜ್ವಲ್ ಬ್ಯಾಕೋಡ್ (ಬಾಗಲಕೋಟೆ)–3. 1500 ಮೀ.: ಸಮರ್ಥ್ ಹೊಸಮನಿ (ದಕ್ಷಿಣ ಕನ್ನಡ, ಕಾಲ:4 ನಿ.2.65 ಸೆ.)–1, ದಕ್ಷ್ ಪಾಟೀಲ (ಬೆಳಗಾವಿ)–2, ಧನುಷ್ ಬಿ.ಎಸ್‌. (ಬೆಂಗಳೂರು ಉತ್ತರ)–3, 5 ಕಿ.ಮೀ. ರೇಸ್‌ವಾಕ್‌: ವಿಲಾಸ್‌ ಗೌಡ ಪಿ. (ದಕ್ಷಿಣ ಕನ್ನಡ, ಕಾಲ: 24 ನಿ.28.53 ಸೆ)–1, ರಾಕೇಶ ಟಿ.ಎನ್‌( ಹಾವೇರಿ)–2, ಲೋಕೇಶ್ ಬಾಬು (ಮಂಡ್ಯ)–3

ಜಾವೆಲಿನ್ ಥ್ರೊ: ಕಲ್ಲೊಳ್ಳೆಪ್ಪ ಬಂಡಿವಡ್ಡರ (ಬೆಳಗಾವಿ, 67.53 ಮೀ.)–1, ಪವನಕುಮಾರ್ ಬಿ.ಎಂ, (ಬೆಂ. ಉತ್ತರ)–2, ಶುಭಂ ಕುರಡೇಕರ್ (ಬೆಳಗಾವಿ)–3. ಪೋಲ್‌ವಾಲ್ಟ್: ರೂಪೇಶ್ ಲಮಾಣಿ (ದಕ್ಷಿಣ ಕನ್ನಡ, ಎತ್ತರ 3.10 ಮೀ.)–1, ರಾಮನಗೌಡ ಪಾಟೀಲ (ಬೆಳಗಾವಿ)–2, ಸಾಹಿಲ್ ಖಾನ್ (ದಕ್ಷಿಣ ಕನ್ನಡ)–3. ಟ್ರಿಪಲ್ ಜಂಪ್‌: ದರ್ಶನ್ ಎಚ್‌, (ಬೆಂ. ದಕ್ಷಿಣ, ದೂರ: 14.07 ಮೀ.)–1, ಮನೀಷ್ (ದಕ್ಷಿಣ ಕನ್ನಡ)–2, ಶರವಣ (ಶಿವಮೊಗ್ಗ)–3. ಶಾಟ್‌ಪಟ್‌: ಅನುರಾಗ್ (ಉಡುಪಿ, ದೂರ: 17.98 ಮೀ.)–1, ಲಿಖಿತ್ ಕೆ.ಆರ್. (ರಾಮನಗರ)–2, ಮನೋಜ್ ಎ.ಎಸ್‌. (ಬೆಂ. ದಕ್ಷಿಣ)–3.

200 ಮೀಟರ್‌ ಓಟದಲ್ಲಿ ಪಾಲ್ಗೊಂಡಿದ ಕ್ರೀಡಾಪಟುಗಳು               ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.