ADVERTISEMENT

ಚಿಂಚೋಳಿ: ಸಂಭ್ರಮದ ಕಿಸ್‌ಮಸ್‌ ಆಚರಣೆ

ಸಡಗರ ಹೆಚ್ಚಿಸಿದ ಸಾಂತಾಕ್ಲಾಸ್, ಯೇಸು ಸಂದೇಶಗಳ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2021, 3:09 IST
Last Updated 26 ಡಿಸೆಂಬರ್ 2021, 3:09 IST
ಚಿಂಚೋಳಿಯ ಚಂದಾಪುರದಲ್ಲಿ ಐಪಿಸಿ ಚರ್ಚ್‌ ವತಿಯಿಂದ ಕ್ರಿಸ್‌ಮಸ್ ಆಚರಿಸಲಾಯಿತು. ಗೋಧಲಿ ಮುಂದೆ ಸಾಂತಾಕ್ಲಾಸ್ ವೇಷಧಾರಿಯ ಗಮನ ಸೆಳೆದರು
ಚಿಂಚೋಳಿಯ ಚಂದಾಪುರದಲ್ಲಿ ಐಪಿಸಿ ಚರ್ಚ್‌ ವತಿಯಿಂದ ಕ್ರಿಸ್‌ಮಸ್ ಆಚರಿಸಲಾಯಿತು. ಗೋಧಲಿ ಮುಂದೆ ಸಾಂತಾಕ್ಲಾಸ್ ವೇಷಧಾರಿಯ ಗಮನ ಸೆಳೆದರು   

ಚಿಂಚೋಳಿ: ಪಟ್ಟಣದ ಚಂದಾಪುರದಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮದಿಂದ ಶನಿವಾರ ಆಚರಿಸಲಾಯಿತು.

ಇಲ್ಲಿನ ಚಂದಾಪುರದ ಆಶ್ರಯ ಬಡಾವಣೆ ಬಳಿ ಐಪಿಸಿ ಚರ್ಚ್‌ ವತಿಯಿಂದ ಆಯೋಜಿಸಿದ ಕ್ರಿಸ್‌ಮಸ್ ಉತ್ಸವದಲ್ಲಿ ಗೋದಲಿ ನಿರ್ಮಿಸಿದ ಯೇಸು ಭಕ್ತರು, ಬಣ್ಣ ಬಣ್ಣದ ವಿದ್ಯುದ್ದೀಪಗಳಿಂದ ಅಲಂಕರಿಸಿ ಆರಾಧಿಸಿದರು.

ಸಾಂತಾಕ್ಲಾಸ್ ವೇಷಧಾರಿ ವ್ಯಕ್ತಿ ಪುಟ್ಟ ಮಕ್ಕಳ ಮಧ್ಯೆ ನಿಂತು ಕೈಬೀಸುತ್ತ ಕ್ರಿಸ್‌ಮಸ್ ಸಡಗರ ಹೆಚ್ಚಿಸಿದ್ದರು.ಪುಟ್ಟ ಮಕ್ಕಳು, ಯುವತಿಯರು ಹೊಸ ಬಟ್ಟೆ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ADVERTISEMENT

ಮಕ್ಕಳಿಗಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕೇಕ್ ಕತ್ತರಿಸುವ ಮೂಲಕ ಪಾಸ್ಟರ್ ಚಂದ್ರಕಾಂತ ಮತ್ತು ಫಾದರ್ ಜಾರ್ಜ ಉದ್ಘಾಟಿಸಿದರು.

ಪುರಸಭೆ ಸದಸ್ಯೆ ಕವಿತಾ ಬಸವರಾ ಕಡಬೂರು, ಸಿಸ್ಟರ್ ನ್ಯಾನ್ಸಿ, ಪಾಸ್ಟರ್ ಸಂಪತಕುಮಾರ, ರಾಜಕುಮಾರ ಕೊಳ್ಳೂರು, ಲಾಲಪ್ಪ, ನಾಗಪ್ಪ ದೊಡ್ಮನಿ ಇದ್ದರು. ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.