ಪ್ರಜಾವಾಣಿ ವಾರ್ತೆ
ಯಡ್ರಾಮಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪೌರ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ತಾಲ್ಲೂಕಿನ ಪೌರ ನೌಕರರ ಸಂಘದ ವತಿಯಿಂದ ಈಚೆಗೆ ಮುಷ್ಕರ ಆರಂಭಿಸಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದ್ದಾರೆ.
‘ಪೌರ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು. ಜಿಪಿಎಫ್, ಕೆಜಿಐಡಿ, ಜ್ಯೋತಿ ಸಂಜೀವಿನಿ ಯೋಜನೆ ಜಾರಿಗೊಳಿಸಬೇಕು. ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ನೀರು ಸರಬರಾಜು ಸಹಾಯಕರು, ವಾಹನ ಚಾಲಕರು, ಬೀದಿದೀಪ ಸಹಾಯಕರು, ಕಾವಲುಗಾರರು ಸೇರಿ ವಿವಿಧ ವೃಂದಗಳ ನೌಕರರಿಗೆ ಸಮಾನ ವೇತನ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.
ಈ ವೇಳೆ ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಶ್ಯಾಮ ಭಜಂತ್ರಿ, ಹಿರಿಯ ಎಂಜಿನಿಯರ್ ಸಿದ್ದಪ್ಪ ಸೋಂಪುರ, ಸಮುದಾಯ ಸಂಘಟನಾಧಿಕಾರಿ ರಘಿನಾಥ ನರಸಾಳ, ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಬಸವರಾಜ ಹೊಸಮನಿ, ಪ್ರಥಮ ದರ್ಜೆ ಸಹಾಯಕ ಸುಲಭ ಕುಲಕರ್ಣಿ, ದ್ವೀತಿಯ ದರ್ಜೆ ಸಹಾಯಕ ಮಹ್ಮದ ಯಾಸೀನ ಅ ಹುಂಡೇಕಾರ, ವಿವೇಕಾನಂದ ಕಡಕೋಳ, ಶಿವಾನಂದ ಶಾವರಿ, ನಾಗೇಂದ್ರ ಹರಳಯ್ಯ, ಶಿವರಾಜಕುಮಾರ, ಮನಿಷಾ ಘಾಟಗೆ, ಶಾರದಾ ಬರ್ಗೆ, ಜಾವೇದ ಹುಸೇನ, ರಾಜಕುಮಾರ ಪಿಂಪಳೆ, ಜಾಕೀರ ಹುಸೇನ, ಮಲ್ಲಿಕಾರ್ಜುನ ಯತ್ನಾಳ, ಗಣಪತಿ ಟಿ ಗಾಡಿ, ಕರಬಸಪ್ಪ ಶಿವಲಿಂಗಪ್ಪ, ದಿಲಿಪ ಶಂಕರ, ಮಡಿವಾಳಪ್ಪ ಗುರುಶೆಟ್ಟಿ, ಬಸವರಾಜ ರಾಜಶೇಖರ, ತಿಪ್ಪಣ್ಣ ಗಿಡ್ರಾಳ, ಮರೆಮ್ಮ ಶಂಕ್ರಪ್ಪ, ಕಾಶಿಬಾಯಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.