ಚಿಂಚೋಳಿ: ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಿಸುವ ನಿರ್ಧಾರ ವಿರೋಧಿಸಿ ಚಿಂಚೋಳಿಯಲ್ಲಿ ವೀರಶೈವ ಲಿಂಗಾಯತರು ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ಮುಖಂಡರೂ ಭಾಗವಹಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ತಾಲ್ಲೂಕು ಘಟಕ ಹಾಗೂ ಬಸವೇಶ್ವರ ಸೇವಾ ಸಮಿತಿ ಆಯೋಜಿಸಿದ ಪ್ರತಿಭಟನೆಯಲ್ಲಿ ಸಮಾಜದ ಮುಖಂಡರು, ಯಡಿಯೂರಪ್ಪ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಇಲ್ಲಿನ ಅಂಬೇಡ್ಕರ್ ವೃತ್ತದಿಂದ ಮುಖ್ಯರಸ್ತೆಯ ಮೂಲಕ ಬಸವೇಶ್ವರ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿದರು. ಯಡಿಯೂರಪ್ಪ ವಿರುದ್ಧ ಕುತಂತ್ರ ನಡೆದಿದೆ ಎಂದು ಒಕ್ಕೊರಲಿನಿಂದ ಖಂಡಿಸಿದರು.
'ಅಂದು ವೀರೇಂದ್ರ ಪಾಟೀಲ, ಇಂದು ಯಡಿಯೂರಪ್ಪ'ಎಂಬ ಘೋಷಣೆಗಳನ್ನೂ ಕೂಗಿದ ಮುಖಂಡರು, 'ವೀರೇಂದ್ರ ಪಾಟೀಲರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್ಸಿಗೆ ಆದ ದುಸ್ಥಿತಿಯೇ, ಯಡಿಯೂರಪ್ಪ ಅವರಿಗೆ ಅನ್ಯಾಯ ಮಾಡಿದರೆ ಬಿಜೆಪಿಗೂ ಎದುರಾಗಲಿದೆ'ಎಂದು ಎಚ್ಚರಿಸಿದರು.
ಕಾಂಗ್ರೆಸ್ ಮುಖಂಡರಾದ ಚಿತ್ರಶೇಖರ ಪಾಟೀಲ, ದೀಪಕನಾಗ ಪುಣ್ಯಶೆಟ್ಟಿ, ಮಲ್ಲಿಕಾರ್ಜುನ ಭೂಶೆಟ್ಟಿ, ಬಸವಣ್ಣ ಪಾಟೀಲ, ಬಿಜೆಪಿಯ ಉಮಾ ಪಾಟೀಲ. ಗೌತಮ ಪಾಟೀಲ, ಸುಭಾಷ ಸೀಳಿನ್, ಅಲ್ಲಮಪ್ರಭು ಹುಲಿ, ಉದಯಕುಮಾರ ಸಿಂಧೋಲ. ಸಂಗಪ್ಪ ಪಾಲಾಮೂರ, ಇಂದುಶೇಖರ ಕೋರಾ, ಭೀಮಶೆಟ್ಟಿ ಮುರುಡಾ, ಭೀಮಶೆಟ್ಟಿ ಮುಕ್ಕಾ, ಭೀಮಶೆಟ್ಟಿ ಜಾಬಶೆಟ್ಟಿ, ಮಲ್ಲಿಕಾರ್ಜುನ ಉಡುಪಿ, ಸಂತೋಷ ಗಡಂತಿ, ದಯಾನಂದ ರೆಮ್ಮಣಿ, ಮಹೇಶ ಬೇಮಳಗಿ, ಕೆ.ಎಂ. ಬಾರಿ, ಉದಯಕುಮಾರ ಪಾಟೀಲ, , ಪೀತಾಂಬರ ಘಂಟಿ, ರಾಜು ಮಜ್ಜಗಿ, ಸಚ್ಚಿದಾನಂದ ಸುಂಕದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.