ADVERTISEMENT

ಕಲಬುರ್ಗಿ ಜಿಲ್ಲೆಯಲ್ಲಿ ಮತ್ತೆ 89 ಜನರಿಗೆ ಸೋಂಕು ದೃಢ

ಸೋಂಕಿತರ ಪೈಕಿ ಕಲಬುರ್ಗಿ ನಗರದವರೇ ಹೆಚ್ಚು; ನಾಲ್ವರು ಮಕ್ಕಳಲ್ಲೂ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 18:36 IST
Last Updated 13 ಜುಲೈ 2020, 18:36 IST

ಕಲಬುರ್ಗಿ: ಜಿಲ್ಲೆಯ ಕೇಂದ್ರ ಕಾರಾಗೃಹದಲ್ಲಿರುವ ಎಂಟು ಜನ ಕೈದಿಗಳು ಹಾಗೂ ಸಿಬ್ಬಂದಿ, ಹೈಕೋರ್ಟ್‌ ಒಬ್ಬರು ಸಿಬ್ಬಂದಿ, ಜಿಮ್ಸ್‌ ಹಾಗೂ ಜಯದೇವ ಆಸ್ಪತ್ರೆಯ ಒಬ್ಬ ವೈದ್ಯರು, ಸ್ಟಾಫ್‌ ನರ್ಸ್‌ ಸೇರಿದಂತೆ ಸೋಮವಾರ 89 ಜನರಲ್ಲಿ ಕೋವಿಡ್–19 ಸೋಂಕು ಕಾಣಿಸಿಕೊಂಡಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2192ಕ್ಕೆ ಏರಿದಂತಾಗಿದೆ. ಆ ಮೂಲಕ ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಳಿಕ ಮೂರನೇ ಸ್ಥಾನದಲ್ಲಿದೆ.

89 ಜನರ ಪೈಕಿ 66 ಜನ ಕಲಬುರ್ಗಿ ನಗರದವರೇ ಸೋಂಕಿತರಿದ್ದಾರೆ. ಬೀದರ್‌ ಜಿಲ್ಲೆಯ ಹುಮನಾಬಾದ್‌ನ ಮೂವರು, ಭಾಲ್ಕಿ ತಾಲ್ಲೂಕಿನ ಖಟಕ್ ಚಿಂಚೋಳಿಯ ಒಬ್ಬ ವ್ಯಕ್ತಿಯ ಗಂಟಲು ದ್ರವದ ತಪಾಸಣೆಯನ್ನು ಇಲ್ಲಿಯೇ ಕೈಗೊಂಡಿದ್ದರಿಂದ ಅವರನ್ನೂ ಇಲ್ಲಿನ ಐಸೋಲೇಶನ್‌ ವಾರ್ಡ್‌ಗೆ ಕಳುಹಿಸಲಾಗಿದೆ. ಸೋಂಕಿತರಲ್ಲಿ 29 ಮಹಿಳೆಯರೂ ಸೇರಿದ್ದಾರೆ.

ADVERTISEMENT

37 ವರ್ಷದ ಪೊಲೀಸ್‌ ಹೆಡ್‌ಕ್ವಾರ್ಟರ್ಸ್‌ ಸಿಬ್ಬಂದಿ, ಹೈಕೋರ್ಟ್‌ನ 25 ವರ್ಷ ಮಹಿಳಾ ಸಿಬ್ಬಂದಿ, 35 ವರ್ಷದ ಜಯದೇವ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ, 27 ವರ್ಷದ ಜಿಮ್ಸ್ ಸ್ಟಾಫ್‌ ನರ್ಸ್‌, 28 ವರ್ಷದ ವೈದ್ಯರ ಕ್ವಾರ್ಟರ್ಸ್‌ನ ವ್ಯಕ್ತಿ, 39 ವರ್ಷದ ಪೊಲೀಸ್‌ ಕ್ವಾರ್ಟರ್ಸ್‌ನ ವ್ಯಕ್ತಿ, ವಿ.ಜಿ. ಮಹಿಳಾ ಕಾಲೇಜಿನ ವಸತಿ ನಿಲಯದ 23 ವರ್ಷ ಯುವತಿ, 27 ವರ್ಷದ ನಗರ ಸಶಸ್ತ್ರ ಪಡೆಯ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ.

ಜಿಲ್ಲೆಯಲ್ಲಿ ಸೋಮವಾರು 29 ಜನ ಗುಣಮುಖರಾಗಿ ಮನೆಗೆ ಮರಳಿದ್ದು, ಒಟ್ಟಾರೆ ಇಲ್ಲಿಯವರೆಗೆ 1506 ಜನ ಗುಣಮುಖರಾಗಿದ್ದು, 650 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.