ADVERTISEMENT

ಲಾಕ್‌ಡೌನ್‌: ಕಲಬುರ್ಗಿ ನಗರ ಸಂಪೂರ್ಣ ಸ್ತಬ್ಧ

ಬೆಳ್ಳಂಬೆಳಿಗ್ಗೆ ಪೊಲೀಸ್ ವಾಹನಗಳ ಸದ್ದು

​ಪ್ರಜಾವಾಣಿ ವಾರ್ತೆ
Published 20 ಮೇ 2021, 4:27 IST
Last Updated 20 ಮೇ 2021, 4:27 IST
ಕಲಬುರ್ಗಿ ನಗರದಲ್ಲಿ ಗುರುವಾರ ಬೆಳಿಗ್ಗೆಯೇ ಆರಂಭವಾದ ಪೊಲೀಸ್‌ ವಾಹನಗಳ ಗಸ್ತು
ಕಲಬುರ್ಗಿ ನಗರದಲ್ಲಿ ಗುರುವಾರ ಬೆಳಿಗ್ಗೆಯೇ ಆರಂಭವಾದ ಪೊಲೀಸ್‌ ವಾಹನಗಳ ಗಸ್ತು   

ಕಲಬುರ್ಗಿ: ಜಿಲ್ಲೆಯಲ್ಲಿ ಮೂರು ದಿನ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿದ್ದು, ಆರಂಭದಿಂದಲೇ ಅದನ್ನು ಬಿಗಿಗೊಳಿಸುವ ಉದ್ದೇಶದಿಂದ ನಗರದಲ್ಲಿ ಗುರುವಾರ ಬೆಳಿಗ್ಗೆಯೇ ಪೊಲೀಸರು ಅಖಾಡಕ್ಕೆ ಇಳಿದರು.

ಬೆಳಗ್ಗೆ 6 ಗಂಟೆಗೆ ಪೊಲೀಸ್ ಅಧಿಕಾರಿಗಳು ಹಾಗೂ ಕಾನ್ ಸ್ಟೆಬಲ್ ಗಳು ವಾಹನ ಸಮೇತ 'ಸಿಟಿ ರೌಂಡ್ಸ್' ಶುರು ಮಾಡಿದರು.

ಜನರು ನಿದ್ದೆಯಿಂದ ಕಣ್ಣುಬಿಡುವ ಹೊತ್ತಿಗೆ ಪೊಲೀಸ್ ವಾಹನಗಳು ಸೈರನ್ ಸದ್ದು ಮಾಡಿದವು. ನಗರದ ಪ್ರಮುಖ ರಸ್ತೆ, ವೃತ್ತ, ಚೌಕಗಳನ್ನು ಸುತ್ತಿದ ಪೊಲೀಸರು, ಅನವಶ್ಯಕವಾಗಿ ಹೊರಗೆ ಬರದಂತೆ ಜನರಿಗೆ ಎಚ್ಚರಿಕೆ ನೀಡಿದರು.

ADVERTISEMENT

ಎಲ್ಲ ವೃತ್ತಗಳಲ್ಲೂ ಪೊಲೀಸರು ಬೀಡು ಬಿಟ್ಟಿದ್ದು ಜನ- ವಾಹನ ಸಂಚಾರದ ಮೇಲೆ ನಿಗಾ ಇಟ್ಟರು.

ಇಲ್ಲಿನ ಕಣ್ಣಿ ಮಾರ್ಕೆಟ್ಟಿನಲ್ಲಿ ಹಳ್ಳಿಯಿಂದ ಬಂದ ರೈತರು ಹಾಗೂ ಸಗಟು ವ್ಯಾಪಾರಿಗಳು ಗುಂಪುಗೂಡಿ ತರಕಾರಿ ಮಾರುತ್ತಿದ್ದರು. ಪೊಲೀಸ್ ವಾಹನಗಳ ಸಾಲು ಕಂಡು ವ್ಯಾಪಾರಕ್ಕೆ ಬಂದವರೆಲ್ಲ ಅಲ್ಲಿಂದ ಕಾಲ್ಕಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.