ಕಲಬುರ್ಗಿ: ಕೋವಿಡ್ ಸೋಂಕಿನಿಂದ ಗುಣಮುಖರಾದ ನಗರದ ಇಬ್ಬರು ಮತ್ತು ಶಹಾಬಾದ್ ಪಟ್ಟಣದ ಬಾಲಕ ಸೇರಿದಂತೆ ಮೂವರನ್ನು ಸೋಮವಾರ ಅಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ಇಲ್ಲಿನ ಖಾದ್ರಿ ಚೌಕ್ ಪ್ರದೇಶದ 34 ವರ್ಷದ ಯುವಕ (ಪಿ–360), ಮೋಮಿನ್‌ಪುರ ಪ್ರದೇಶದ 30 ವರ್ಷದ ಯುವತಿ (ಪಿ–393) ಹಾಗೂ ಶಹಾಬಾದ್ ಪಟ್ಟಣದ ಅಪ್ಪರ ಮಡ್ಡಿ ಪ್ರದೇಶದ 16 ವರ್ಷದ ಬಾಲಕ (ಪಿ–361) ಸೋಂಕಿನಿಂದ ಗುಣಮುಖರಾದವರು.
ಇವರೊಂದಿಗೆ ಜಿಲ್ಲೆಯಲ್ಲಿ ಇದೂವರೆಗೆ ಸೋಂಕಿತರಾದ 63 ಜನರಲ್ಲಿ ಒಟ್ಟು 21 ಜನ ಗುಣಮುಖರಾಗಿದ್ದಾರೆ. ಆರು ಮಂದಿ ಮೃತಪಟ್ಟು, 36 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.