ಕಲಬುರ್ಗಿ: ಕೊರೊನಾ ವೈರಾಣು ಹತೋಟಿಗಾಗಿ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ 7ರಿಂದಲೇ ವಾರಾಂತ್ಯ ಕರ್ಫ್ಯೂ ಜಾರಿ ಮಾಡಲಾಗಿದ್ದು, ಸೋಮವಾರ (ಜೂನ್ 21) ಬೆಳಿಗ್ಗೆ 5 ಗಂಟೆಯವರೆಗೂ ಮುಂದುವರಿಯಲಿದೆ.
ಶುಕ್ರವಾರ ಸಂಜೆಯಿಂದಲೇ ಹಲವರು ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದರು. ಮತ್ತೆ ಕೆಲವರು ಬೇಗನೇ ತಮ್ಮ ಮನೆ ಸೇರಿಕೊಂಡರು. ಸಂಜೆ 7ರ ನಂತರ ಓಡಾಡಲು ಶುರು ಮಾಡಿದ ವಾಹನಗಳನ್ನು ತಡೆದ ಪೊಲೀಸರು ತಪಾಸಣೆ ನಡೆಸಿದರು. ಮುಖ್ಯ ಮಾರುಕಟ್ಟೆಗಳಲ್ಲಿ ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದರು.
ಶನಿವಾರ ಹಾಗೂ ಭಾನುವಾರ ತುರ್ತು ಮತ್ತು ಅಗತ್ಯ ಸೇವೆಗಳು ಹೊರತುಪಡಿಸಿ ಉಳಿದೆಲ್ಲವೂ ಅಂಗಡಿಗಳು ಮುಚ್ಚಲಿವೆ. ಹೋಟೆಲ್‌ಗಳಿಂದ ಪಾರ್ಸೆಲ್ ನೀಡಲು ಅವಕಾಶವಿದೆ. ಕೃಷಿ ಸಲಕರಣೆಗಳು ಮತ್ತು ಅಗತ್ಯ ವಸ್ತುಗಳ ಖರೀದಿ ಮಧ್ಯಾಹ್ನ ಬೆಳಿಗ್ಗೆ 6ರಿಂದ 1 ಗಂಟೆಯವರಗೆಗೂ ಅವಕಾಶ ನೀಡಲಾಗಿದೆ. ಕಟ್ಟಡ ನಿರ್ಮಾಣ, ವಾಹನಗಳ ದುರಸ್ತಿ ಘಟಕಗಳು ಬಂದ್ ಆಗಲಿವೆ.
ಅನಗತ್ಯವಾಗಿ ವಾಹನಗಳ ಒಡಾಟ ನಿಲ್ಲಿಸುವಂತೆ ಸೂಚಿಸಲಾಗಿದೆ. ಅದಾಗಿಯೂ ವಿನಾಕಾರಣ ಹೊರಗೆ ಬರುವವರಿಗೆ ದಂಡ ಕಟ್ಟಿಟ್ಟ ಬುತ್ತಿ ಎಂದು ನಗರ ಪೊಲೀಸ್ ಕಮಿಷನರ್ ಡಾ.ವೈ.ಎಸ್. ರವಿಕುಮಾರ್ ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.