ADVERTISEMENT

ಸೇಡಂ: ಕೋವಿಡ್ ಲಸಿಕೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 8:30 IST
Last Updated 16 ಜನವರಿ 2021, 8:30 IST
ಕೋವಿಡ್ ಲಸಿಕೆ ಹಾಕುವ ವಿಧಾನವನ್ನು ಚಿತ್ತಾಪುರ ಶಾಸಕರು ಹಾಗೂ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಪರಿಶೀಲಿಸಿದರು
ಕೋವಿಡ್ ಲಸಿಕೆ ಹಾಕುವ ವಿಧಾನವನ್ನು ಚಿತ್ತಾಪುರ ಶಾಸಕರು ಹಾಗೂ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಪರಿಶೀಲಿಸಿದರು   

ಸೇಡಂ (ಕಲಬುರ್ಗಿ ಜಿಲ್ಲೆ): ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ನೀಡಲು ಶನಿವಾರ ಚಾಲನೆ ನೀಡಲಾಯಿತು.

ಆಸ್ಪತ್ರೆಯ ಗ್ರೂಪ್ ಡಿ ಸಿಬ್ಬಂದಿ ಸಂತೋಷ ಅವರಿಗೆ ಕೋವಿಡ್ ಮೊ‌ದಲ ಲಸಿಕೆ ನೀಡಲಾಯಿತು.

ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಮಾತನಾಡಿ, ಕೊರೊನಾ ಹಾವಳಿ ತಡೆಗಟ್ಟಲು ಲಸಿಕೆ ಸಿಗುತ್ತಿರುವುದು ನಮ್ಮೆಲ್ಲರ ಹೆಮ್ಮೆ. ಕೋವಿಡ್ ಬಂದರೂ ಹೆದರುವ ಅವಶ್ಯಕತೆ ಇಲ್ಲ. ಧೈರ್ಯದಿಂದ ಇದ್ದು ಎದುರಿಸಬೇಕು' ಎಂದರು.

ADVERTISEMENT

ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗೀತಾ ಶ್ರೀನಿವಾಸರೆಡ್ಡಿ ಪಾಟೀಲ, ವಿವೇಕರೆಡ್ಡಿ, ಶ್ರೀಮಂತ ಆವಂಟಿ, ವಿಜಯಕುಮಾರ್ ಶರ್ಮಾ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಇದ್ದರು.

ಅಕ್ಷಯ್‌ಗೆ ಮೊದಲ ಲಸಿಕೆ
ಚಿತ್ತಾಪುರ (ಕಲಬುರ್ಗಿ ಜಿಲ್ಲೆ):
ಇಲ್ಲಿನತಾಲ್ಲೂಕು ಆಸ್ಪತ್ರೆಯಲ್ಲಿ ಶನಿವಾರ ಅಕ್ಷಯ್ ಕುಮಾರ ಎನ್ನುವ ಡಿ ಗ್ರೂಪ್ ನೌಕರರಿಗೆ ಮೊದಲ ಲಸಿಕೆ ನೀಡಲಾಯಿತು.

ಶಾಸಕ ಪ್ರಿಯಾಂಕ್ ಖರ್ಗೆ ಅವರು ಲಸಿಕೆ ನೀಡುವ ವಿಧಾನವನ್ನು ಖುದ್ದು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ತಿಪ್ಪಣ್ಣಪ್ಪ ಕಮಕನೂರು, ತಾ.ಪಂ ಅಧ್ಯಕ್ಷ ಜಗನರೆಡ್ಡಿ ಪಾಟೀಲ, ತಹಶೀಲ್ದಾರ್ ಉಮಾಕಾಂತ್ ಹಳ್ಳೆ ಹಾಗೂ ವೈದ್ಯಾಧಿಕಾರಿಗಳು ಹಾಜಿರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.